ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

Public TV
1 Min Read
MANGALURU SUICIDE 1

ಮಂಗಳೂರು: ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆ.ಎಸ್.ರಾವ್ ರೋಡ್ (K S Rao Road Mangaluru) ಬಳಿ ನಡೆದಿದೆ.

ಮೃತರನ್ನು ದೇವೇಂದ್ರ(48), ನಿರ್ಮಲಾ(48), ಚೈತ್ರಾ(09) ಹಗೂ ಚೈತನ್ಯ (09) ಎಂದು ಗುರುತಿಸಲಾಗಿದೆ. ಕೆ.ಎಸ್.ರಾವ್ ರೋಡಿನ ಕರುಣಾ ಲಾಡ್ಜ್ ನಲ್ಲಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

MANGALURU SUICIDE 2

ಮೃತರು ಮೈಸೂರು ಮೂಲದ ವಾಣಿವಿಲಾಸ ಬಡಾವಣೆ ನಿವಾಸಿಗಳಾಗಿದ್ದು, ಮಾ. 27ರಂದು ಮಂಗಳೂರಿನಲ್ಲಿ ಒಂದು ದಿನಕ್ಕಾಗಿ ರೂಂ ಬುಕ್ ಮಾಡಿದ್ದರು. ಬಳಿಕ ಅದನ್ನು ಎರಡು ದಿನಕ್ಕಾಗಿ ವಿಸ್ತರಣೆ ಮಾಡಿದ್ದರು. ಗುರುವಾರ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಇಂದು ತಪಾಸಣೆ ನಡೆಸಿದಾಗ ಬೆಳಕಿಗೆ ಬಂದಿದೆ.

MANGALURU SUICIDE

ಸಾಲಬಾಧೆ, ಸಾಲ ತೀರಿಸಲಾಗದೇ ಸಾಲಗಾರರ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ; ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಗುಂಡಿಕ್ಕಿ ಹತ್ಯೆ – ತಿಂಗಳಲ್ಲಿ 2ನೇ ಘಟನೆ

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article