ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಅಮೆರಿಕದಲ್ಲಿ ನಿಗೂಢ ಸಾವು

Public TV
1 Min Read
indian family found dead in us New Jersey

ವಾಷಿಂಗ್ಟನ್: ಭಾರತ ಮೂಲದ (Indian Origin) ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದ (America) ನ್ಯೂಜೆರ್ಸಿಯಲ್ಲಿ (New Jersey) ನಡೆದಿದೆ.

ತೇಜ್ ಪ್ರತಾಪ್ ಸಿಂಗ್ (43), ಸೋನಾಲ್ ಪರಿಹಾರ್ (42) ಮತ್ತು ಈ ದಂಪತಿಯ 10 ಹಾಗೂ 6 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅನುಮಾನಾಸ್ಪದವಾಗಿ ನಾಲ್ವರ ಶವ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

indian family found dead in us New Jersey 1

ಕುಟುಂಬ ವಾಸಿಸುತ್ತಿದ್ದ ನೆರೆಹೊರೆಯವರು ಅಕ್ಟೋಬರ್ 4 ರಂದು ಸಂಜೆ ಪೊಲೀಸರಿಗೆ ಕರೆ ಮಾಡಿ, ಅವರ ಯೋಗಕ್ಷೇಮದ ಬಗ್ಗೆ ಅನುಮಾನ ಮೂಡುತ್ತಿರುವುದಾಗಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ನಾಲ್ವರು ಕೂಡಾ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಖಡಕ್ ಸೂಚನೆ

ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಮಾತನಾಡಿರುವ ಪ್ಲೇನ್ಸ್‌ಬೊರೊ ಮೇಯರ್ ಪೀಟರ್ ಕ್ಯಾಂಟು, ನಮ್ಮ ಸಮುದಾಯದಲ್ಲಿ ಏನಾಗಿದೆ ಎಂಬುದು ಗ್ರಹಿಕೆಗೆ ಮೀರಿದೆ. ಈ ದುರಂತ ಘಟನೆಯಿಂದ ನಾವು ದುಃಖಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.

ದಂಪತಿಯಿಬ್ಬರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಒಬ್ಬರು ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೇಜ್ ಪ್ರತಾಪ್ ಸಿಂಗ್ ಮೊದಲು ತನ್ನ ಕುಟುಂಬವನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ದಂಪತಿ ಸಂತೋಷವಾಗೇ ಇದ್ದರು, ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Web Stories

Share This Article