ವಿಜಯಪುರ: ಸರ್ಕಾರಿ ಆಸ್ಪತ್ರೆಗಳು ಅತ್ಯಾಧುನಿಕ ಸಾಮಗ್ರಿಗಳನ್ನು ಹೊಂದಿದ್ದು, ಸುಸಜ್ಜಿತವಾಗಿವೆ. ಇಷ್ಟೆಲ್ಲ ಇದ್ದರೂ ವೈದ್ಯರ ಕೊರತೆ ನೆಪವೊಡ್ಡಿ ಸರ್ಕಾರಿ ಆಸತ್ಪತ್ರೆಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ.
Advertisement
ಅತ್ಯಾಧುನಿಕ ಉಪರಣಗಳನ್ನು ಹೊಂದುವ ಮೂಲಕ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿವೆ. ಆದರೆ ವೈದ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯ ಕೊರತೆ ಸರ್ಕಾರಕ್ಕೆ ತಲೆ ನೊವಾಗಿದೆ. ಇದಕ್ಕಾಗಿ ಜಿಲ್ಲೆಯ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎನ್‍ಜಿಓಗಳಿಗೆ ನೀಡಲಾಗಿದೆ.
Advertisement
ಜಿಲ್ಲೆಯ ಅಸ್ಕಿ, ಬಂಟನೂರ, ಜಿಗಜೀವಣಗಿ ಹಾಗೂ ಕನ್ನೂರು ಆಸ್ಪತ್ರೆಗಳನ್ನು ಎನ್‍ಜಿಓಗಳಿಗೆ ನೀಡಲಾಗಿದೆ. ಈ ಆಸ್ಪತ್ರೆಯ ಸಂಪೂರ್ಣ ಸಿಬ್ಬಂದಿಯನ್ನು ಈ ಎನ್‍ಜಿಓಗಳು ನಿಭಾಯಿಸಲಿವೆ. ಮೂರು ವರ್ಷಗಳ ಒಪ್ಪಂದ ಇದಾಗಿದ್ದು, ಸಾರ್ವಜನಿಕರಲ್ಲಿ ಸರ್ಕಾರಿ ಆಸ್ಪತ್ರೆಗಳ ಖಾಸಗಿಕರಣದ ಆತಂಕ ಶುರುವಾಗಿದೆ.
Advertisement
Advertisement
ಬಡವರ ಬಂಧು ಯೋಜನೆ ಹೆಸರಲ್ಲಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಯನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡಬಹುದು. ಅಲ್ಲದೆ ಇದು ಬುಹು ಹಿಂದಿನ ಯೋಜನೆ ಆಗಿದೆ. ಈ ಯೋಜನೆ ಅಡಿ ಇದೀಗ ಖಾಸಗಿ ನಿರ್ವಹಣೆಗೆ ನೀಡಲಾಗಿದೆ. ಆದರೆ ಎನ್‍ಜಿಓಗಳು ಕೇವಲ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಮಾತ್ರ ನೇಮಕ ಮಾಡಿಕೊಳ್ಳತ್ತದೆ. ಉಳಿದಂತೆ ಔಷಧಿ ವಿತರಣೆ, ಸಿಬ್ಬಂದಿ ವೇತನ, ಚಿಕಿತ್ಸಾ ಸಾಮಗ್ರಿಗಳ ಖರೀದಿ, ತಂತ್ರಜ್ಞಾನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಆರೋಗ್ಯ ಇಲಾಖೆಯೇ ನೋಡಿಕೊಳ್ಳಲಿದೆ. ಎನ್‍ಜಿಓಗಳ ಕಾರ್ಯವೈಖರಿಯನ್ನು ಇಲಾಖೆ ಹತೋಟೆಯಲ್ಲಿಡಲಿದೆ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಹೇಳಿದ್ದಾರೆ.