ಭೋಪಾಲ್: ಹಿಂದುತ್ವ ಪ್ರತಿಪಾದಕಿ ಸಾಧ್ವಿ ರಿತಂಬರ ನಡೆಸುತ್ತಿರುವ ರೆಸಿಡೆನ್ಷಿಯಲ್ ಆಶ್ರಮ ಶಾಲೆಯಲ್ಲಿ ಓದುತ್ತಿದ್ದ ನಾಲ್ವರು ಬಾಲಕಿಯರು ಕಾಲುವೆಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆಯುತ್ತಿದೆ.
ವೈಶಾಲಿ, ಪ್ರತಿಗ್ಯಾ, ದಿವ್ಯಶ್ರೀ, ಅಂಜಲಿ ಮೃತ ವಿದ್ಯಾರ್ಥಿನಿಯರು. ಕೋಥಿ ಗ್ರಾಮದ ಮಾಂಧತ್ (ಓಂಕಾರೇಶ್ವರ) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಲ್ಲಿ ಮಸೀದಿ, ಮಂದಿರಗಳೆಲ್ಲವೂ ನಮ್ಮ ದೇಹದಂತೆ ಒಟ್ಟಿಗೆ ಇರುತ್ತವೆ: ಮಮತಾ
Advertisement
Advertisement
ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರು 10, 11 ವಯಸ್ಸಿನವರಾಗಿದ್ದಾರೆ. ಅವರು ಆಶ್ರಯಮದಲ್ಲಿ ಐದನೇ ತರಗತಿ ಓದುತ್ತಿದ್ದರು ಎಂದು ತಿಳಿದುಬಂದಿದೆ.
Advertisement
ಒಬ್ಬ ವಿದ್ಯಾರ್ಥಿನಿ ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದಾರೆ. ಸ್ನಾನ ಮಾಡುವಾಗ ಕಾಲು ಜಾರಿ ಕಾಲುವೆಯಲ್ಲಿ ಮುಳುಗುತ್ತಿದ್ದಾಗ ಆಕೆಯನ್ನು ರಕ್ಷಿಸಲು ಇತರೆ ವಿದ್ಯಾರ್ಥಿನಿಯರು ತೆರಳಿದ್ದಾರೆ. ಈ ವೇಳೆ ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಬಲರಾಮ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ
Advertisement
ಪೊಲೀಸರು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಕ್ಕಳ ದುರಂತ ಸಾವಿಗೆ ಸಂತಾಪ ಸೂಚಿಸಿದ್ದಾರೆ.