ಚಿತ್ರದುರ್ಗ: ಸ್ವಿಫ್ಟ್ ಡಿಸೈರ್ ಕಾರು ಒಂದು ಲಾರಿಗೆ ಡಿಕ್ಕಿ ಹೊಡೆದಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಭೀಕರ ಅಪಘಾತವೊಂದು ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದಿದೆ.
Advertisement
ದೊಡ್ಡಪ್ಪ ದೇಸಾಯಿ(35), ಶ್ವೇತಾ ದೇಸಾಯಿ(2), ಭಾಗ್ಯಮ್ಮ(60) ಸುವರ್ಣಮ್ಮ (55) ಅಪಘಾತದಲ್ಲಿ ಮೃತ ದುರ್ದೈವಿಗಳು. ಮೃತರು ವಿಜಯಪುರ ಮೂಲದವರು ಎಂದು ಹೇಳಲಾಗಿದೆ. ಮೃತರು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
Advertisement
Advertisement
ಲಾರಿಗೆ ಹಿಂಬದಿಯಿಂದ ಬಂದು ಕಾರು ಡಿಕ್ಕಿಯಾಗಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
Advertisement