ಹೌರಾ ಬಳಿ ಹಳಿ ತಪ್ಪಿದ ಸಿಕಂದರಾಬಾದ್-ಶಾಲಿಮಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು

Public TV
1 Min Read
Secunderabad Shalimar Superfast

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ ಬಳಿ ಸಿಕಂದರಾಬಾದ್-ಶಾಲಿಮಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ನಡೆದಿದೆ.

ಕೋಲ್ಕತ್ತಾದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ನಲ್ಪುರದಲ್ಲಿ ಸಾಪ್ತಾಹಿಕ ವಿಶೇಷ ರೈಲು ಹಳಿತಪ್ಪಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ಹೆಚ್ಚಿನ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಇಂದು ಮುಂಜಾನೆ 5:31 ಕ್ಕೆ ಖರಗ್‌ಪುರ ವಿಭಾಗದ ನಲ್ಪುರ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ 22850 ಸಿಕಂದರಾಬಾದ್-ಶಾಲಿಮಾರ್ ವೀಕ್ಲಿ ಎಕ್ಸ್‌ಪ್ರೆಸ್‌ನ ಪಾರ್ಸೆಲ್ ವ್ಯಾನ್ ಮತ್ತು ಎರಡು ಕೋಚ್‌ಗಳು ಹಳಿತಪ್ಪಿವೆ. ಅವಘಡದಲ್ಲಿ ಅದೃಷ್ಟವಶಾತ್‌ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಆಗ್ನೇಯ ರೈಲ್ವೆ ತಿಳಿಸಿದೆ.

ರೈಲು ಹಳಿ ತಪ್ಪಿದ ಸ್ಥಳಕ್ಕೆ ಸಂತ್ರಗಚ್ಚಿ ಮತ್ತು ಖರಗ್‌ಪುರದಿಂದ ವೈದ್ಯಕೀಯ ನೆರವು ಒದಗಿಸಲಾಗಿದೆ. ಅವಘಡದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಕರೆದೊಯ್ಯಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

Share This Article