– ನನ್ನ ಗಂಡನನ್ನ ತುಂಬಾ ನಂಬಿದ್ದೆ, ಅವನು ಮೋಸ ಮಾಡ್ಬಿಟ್ಟ ಎಂದು ಕಣ್ಣೀರು
– ತಂದೆ ಕುತಂತ್ರಕ್ಕೆ ಮುದ್ದು ಕಂದಮ್ಮಗಳು ಬಲಿ
ವಿಜಯಪುರ: ಕಾಲುವೆಗೆ ನಾಲ್ಕು ಮಕ್ಕಳು ಮತ್ತು ಪತ್ನಿಯನ್ನು ದೂಡಿ ಪತಿ ಆತ್ಮಹತ್ಯೆಗೆ ಯತ್ನದ ನಾಟಕವಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಬದುಕುಳಿದ ಮಹಿಳೆ ತನ್ನ ಪತಿಯ ಬಣ್ಣವನ್ನು ಬಯಲು ಮಾಡಿದ್ದಾರೆ.
Advertisement
ಆರೋಪಿ ಲಿಂಗರಾಜು ನಾಟಕಕ್ಕೆ ತನು, ರಕ್ಷಾ, ಹಸೇನ್, ಹುಸೇನ್ ಮಕ್ಕಳು ದುರಂತ ಸಾವು ಕಂಡಿವೆ. ಲಿಂಗರಾಜು ಪತ್ನಿ ಭಾಗ್ಯ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದ ಘಟನೆಯನ್ನು ಸಂಬಂಧಿಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಆಕೆಯ ಪತಿ ನಿಜ ಬಣ್ಣ ಬಯಲಾಗಿದೆ.
Advertisement
Advertisement
ಮಹಿಳೆ ಹೇಳಿದ್ದೇನು?
ಮನೆಯಲ್ಲಿ ಸಾಯೋಣ ಅಂತ ಮೂರು ದಿನದ ಹಿಂದೆ ನನ್ನ ಪತಿ ಲಿಂಗರಾಜು ವಿಷ ತಂದು ಇಟ್ಟಿದ್ದ. ಮಕ್ಕಳಿಗೆ ವಿಷ ಕುಡಿಸಿದ್ದ. ಮನೆಯಲ್ಲಿ ಸಂಪೂರ್ಣ ವಿಷ ತೆಗೆದುಕೊಂಡರೆ ಎಲ್ಲರಿಗೂ ಗೊತ್ತಾಗುತ್ತದೆ ಅಂತಾ ಹೊರಗಡೆ ಕರೆದುಕೊಂಡು ಬಂದ. ನಂತರ ಕಾಲುವೆ ಹತ್ತಿರ ಬಂದು ಮೊದಲು ಎರಡು ಮಕ್ಕಳನ್ನು ತಳ್ಳಿದ. ತದನಂತರ ಎರಡು ಮಕ್ಕಳು ಮತ್ತು ನನ್ನನ್ನು ಕಾಲುವೆಗೆ ದೂಡಿದ. ನನ್ನ ಗಂಡನನ್ನು ತುಂಬಾ ನಂಬಿದ್ದೆ. ದೇವರಿಗಿಂತ ಹೆಚ್ಚು ನಂಬಿದ್ದೆ. ಆದರೆ, ಅವನು ನನಗೆ ಮೋಸ ಮಾಡಿಬಿಟ್ಟ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
Advertisement
ನಾಲ್ಕು ಮಕ್ಕಳನ್ನು (Childrens) ಕಾಲುವೆಗೆ ಎಸೆದು ತಾಯಿ (Mother) ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ (Vijayapura) ಜಿಲ್ಲೆ ನಿಡಗುಂದಿ (Nidagundi) ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿತ್ತು.
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ಲಿಂಗರಾಜ ಭಜಂತ್ರಿ (5), ರಕ್ಷಾ ಲಿಂಗಗರಾಜ ಭಜಂತ್ರಿ (3), ಹಸನ್ ಲಿಂಗರಾಜ ಭಜಂತ್ರಿ ಹಾಗೂ ಹುಸೇನ್ ಲಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳೀಯರು ಕಾಪಾಡಿದ್ದಾರೆ. ಕೌಟುಂಬಿಕ ಕಾರಣವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಬಹುದಿನಗಳಿಂದ ಭಾಗ್ಯಳ ಪತಿ ನಿಂಗರಾಜ ಅಣ್ಣತಮ್ಮಂದಿರ ಮಧ್ಯೆ ಆಸ್ತಿಗಾಗಾಗಿ ಕಲಹ ನಡೆದಿತ್ತು. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಅಂತಾ ಲಿಂಗರಾಜ್‌ಗೆ ಅಣ್ಣತಮ್ಮಂದಿರು ಹೇಳಿದ್ದರು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು. ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ನಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ. ಆಗ ಪೆಟ್ರೋಲ್ ತರಲೆಂದು ನಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ಲಿಂಗರಾಜು ಕಣ್ಣೀರು ಹಾಕಿ ನಾಟಕವಾಡಿದ್ದ. ಆದರೆ, ಬದುಕುಳಿದ ಪತಿಯ ನಾಟಕವನ್ನು ಪತ್ನಿ ಬಯಲು ಮಾಡಿದ್ದಾರೆ.