ಬೆಂಗಳೂರು: ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಭವನ ಹಾಗೂ ಸಂಶೋಧನಾ ಭವನ ಕಟ್ಟಡಗಳ ಶಂಕುಸ್ಥಾಪನೆ ಸಂದರ್ಭ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಮತ್ತು ಶಾಸಕ ಮುನಿರತ್ನ (Munirathna) ಹಾರೆ ಹಿಡಿದು ಗುದ್ದಲಿ ಪೂಜೆ ಮಾಡಿದ್ದಾರೆ.
ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಮಂಜೂರಾಗಿರುವ ಶೈಕ್ಷಣಿಕ ಭವನ ಹಾಗೂ ಸಂಶೋಧನಾ ಭವನ ಕಟ್ಟಡಗಳ ಶಂಕುಸ್ಥಾಪನೆ ನಡೆಯಿತು. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಂಗನಾ ರಣಾವತ್ ಭೇಟಿ
ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅಧ್ಯಕ್ಷತೆ ವಹಿಸಿದ್ದು, ಶಂಕುಸ್ಥಾಪನೆ ನೆರವೇರಿಸಲು ಡಿಕೆಶಿ ಅವರನ್ನ ಆಹ್ವಾನಿಸಿದ್ದರು. ಈ ವೇಳೆ ಇಬ್ಬರು ಸೇರಿ ಶಂಕುಸ್ಥಾಪನೆ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಉಪಸ್ಥಿತರಿದ್ದರು. ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಕೆಲಸ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಸೂಚನೆ
ಇತ್ತೀಚಿನ ದಿನಗಳಲ್ಲಿ ಡಿಕೆ ಬ್ರದರ್ಸ್ ಮತ್ತು ಮುನಿರತ್ನ ನಡುವೆ ರಾಜಕೀಯ ಜಟಾಪಟಿ ಜೋರಾಗಿತ್ತು. ಇದೀಗ ಇಬ್ಬರು ಸೇರಿ ಗುದ್ದಲಿ ಪೂಜೆ ಮಾಡಿರುವುದು ನಾನಾ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ