ಬೆಂಗಳೂರು: ಸದಾಶಿವ ನಗರದ (Sadashiva Nagar) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಮನೆಯ ಬಳಿ ನಕಲಿ ನಂಬರ್ ಪ್ಲೇಟ್‌ನ ಫಾರ್ಚೂನರ್ ಕಾರೊಂದು ಪತ್ತೆಯಾಗಿದೆ.
ಸೆ.07ರಂದು ಫಾರ್ಚೂನರ್ ಕಾರು ಪತ್ತೆಯಾಗಿತ್ತು. ಹೀಗಾಗಿ ಕಾರನ್ನು ಟೋಯಿಂಗ್ ಮಾಡಲು ಪೊಲೀಸರು ಬಂದಿದ್ದರು. ಈ ವೇಳೆ ಕಾರಿನ ಮೇಲಿನ KA51MW6814 ನಂಬರ್ ಪ್ಲೇಟ್ ಇರುವುದನ್ನು ಗಮನಿಸಿ, ಮಾಲೀಕರ ಸಂಪರ್ಕಕ್ಕೆ ಮುಂದಾಗಿದ್ದಾರೆ. ಆಗ ದೀಪಕ್ ಎಂಬುವವರಿಗೆ ಸೇರಿದ ಕಾರು ಎಂದು ತಿಳಿದಿದ್ದು, ಕರೆ ಮಾಡಿದ್ದಾರೆ. ಈ ವೇಳೆ ದೀಪಕ್ ಕಾರು ನಮ್ಮ ಮನೆ ಬಳಿಯೇ ಇದೆ ಎಂದಿದ್ದರು.ಇದನ್ನೂ ಓದಿ: ಸಿಎಂ ನಿವಾಸದ ಮುಂದೆ ಹೊತ್ತಿ ಉರಿದ ಕಾರು – ಕೂದಲೆಳೆ ಅಂತರದಲ್ಲಿ ಚಾಲಕ ಪಾರು
ಇನ್ನೂ ಕಾರಿನ ಹಿಂಭಾಗದಲ್ಲಿ ಬೇರೆ KA42P6606 ನಂಬರ್ ಪ್ಲೇಟ್ ಇರುವುದನ್ನು ಗಮನಿಸಿ, ಮಾಲೀಕರನ್ನು ಪತ್ತೆಗೆ ಮುಂದಾಗಿದ್ದು, ರಾಮನಗರ ರಿಜಿಸ್ಟ್ರೇಷನ್ ಹೊಂದಿರುವ ಮಂಜುನಾಥ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಕಾರನ್ನು ಸೀಜ್ ಮಾಡಲಾಗಿದ್ದು, ಮಾಲೀಕ ಮಂಜುನಾಥ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಪತ್ತೆಯಾಗಿರುವ ಕಾರು ಮಾಗಡಿ ಮಾಜಿ ಎಂಎಲ್‌ಎ ಮಂಜುನಾಥ್‌ಗೆ ಸೇರಿದ್ದು ಎನ್ನಲಾಗಿದ್ದು, ಈ ಬಗ್ಗೆ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಆ ದಿನ ಮಂಜುನಾಥ್ ಬಂದಿರಲಿಲ್ಲ, ಬದಲಾಗಿ ಮಾಗಡಿ ಮೂಲದ ಬೇರೊಬ್ಬರು ಕಾರನ್ನು ತಂದಿದ್ದರು ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.ಇದನ್ನೂ ಓದಿ: ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಅಸ್ತು – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ