ಬೆಂಗಳೂರು: ನಗರದ ವೈಟ್ ಫೀಲ್ಡ್ ಪೊಲೀಸರು ಮಾಜಿ ಉಪರಾಷ್ಟ್ರಪತಿಯವರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.
ಎಸಿಪಿ ಸುಧಾಮ ನಾಯಕ್, ಸಬ್ ಇನ್ಸಪೆಕ್ಟರ್ ಸೋಮಶೇಖರ್ ವಿರುದ್ಧ ಈ ಆರೋಪ ವ್ಯಕ್ತವಾಗಿದ್ದು, ಈ ಕುರಿತು ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ಈಗಾಗಲೇ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‍ಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ಅವರಿಗೆ ವಿಲ್ಲಾ ಮಾಲೀಕರು ಕಿರುಕುಳ ನೀಡುತ್ತಿದ್ದು, ಈ ಕುರಿತು ಲಕ್ಷ್ಮಿ ಅವರು ಪೊಲೀಸರಿಗೆ ದೂರು ನಿಡಿದ್ದಾರೆ. ಆದ್ರೆ ಪೊಲೀಸರು ವಿಲ್ಲಾ ಓನರ್ ಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೇ ಎಫ್‍ಐಆರ್ ದಾಖಲಿಸಿಕೊಳ್ಳಬೇಕಾದ್ರೆ ಹಣ ನೀಡಬೇಕು ಅಂತ ವೈಟ್‍ಫೀಲ್ಡ್ ಪೊಲೀಸ್ ಠಾಣೆಯ ಎಸಿಪಿ, ಎಸ್‍ಐ ಬೇಡಿಕೆಯಿಟ್ಟಿದ್ದಾರೆ ಅಂತ ಅವರು ಆರೋಪಿಸಿದ್ದಾರೆ.
Advertisement
Advertisement
ಈಗಾಗಲೇ ಎಸಿಪಿ ಮೂರನೇ ವ್ಯಕ್ತಿಯಿಂದ 5 ಲಕ್ಷ ಹಾಗೂ ಸಬ್ ಇನ್ಸಪೆಕ್ಟರ್ ಗೆ 2 ಲಕ್ಷ ನೀಡಿದರೂ ಮತ್ತೆ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿಲ್ಲಾ ವಿಚಾರವಾಗಿ ಜತ್ತಿ ಕುಟುಂಬಕ್ಕೆ ಮತ್ತು ವಿಲ್ಲಾ ಓನರ್ ಗಳ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರದ ಜಗಳ ಕೂಡ ಕೋರ್ಟ್ ಮೆಟ್ಟಿಲಲ್ಲೂ ಇದೆ. ವಿಲ್ಲಾ ಓನರ್ ಗಳು ದೂರು ನೀಡಿದರೆ ಎಫ್‍ಐಆರ್ ದಾಖಲಿಸಿ ನಮ್ಮನ್ನ ತನಿಖೆ ಮಾಡ್ತಾರೆ. ನಾವು ದೂರು ನೀಡಿದರೆ ಎನ್ ಸಿ ಆರ್ ಹಾಕಿ ಕಳಿಸುತ್ತಾರೆ. ಆದರೂ ವಿಲ್ಲಾ ಓನರ್ ಗಳಿಂದಾಗುವ ಕಿರುಕುಳದ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಬೇಕಾದ್ರೆ ಹಣ ನೀಡಬೇಕು. ಅಷ್ಟೇ ಅಲ್ಲದೇ ತಮ್ಮ ವಿಲ್ಲಾ ಗಳಲ್ಲಿ ಒಂದು ವಿಲ್ಲಾ ತನಗೆ ನೀಡಬೇಕು ಅಂತ . ಎಸಿಪಿ ಸುಧಾಮನಾಯಕ ಬೇಡಿಕೆ ಇಟ್ಟಿರುವುದಾಗಿ ಲಕ್ಷ್ಮೀ ಜತ್ತಿ ಅವರು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv