ಡೆಹ್ರಾಡೂನ್: ಪಕ್ಷ ವಿರೋಧಿ ಕೆಲಸದಲ್ಲಿ ತೊಡಗಿಕೊಂಡಿರುವ ಉತ್ತರಾಖಂಡದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ ಅವರನ್ನು ಕಾಂಗ್ರೆಸ್ ಉಚ್ಛಾಟಿಸಿದೆ.
ಕಿಶೋರ್ಉಪಾಧ್ಯಾಯ ಅವರು ಪಕ್ಷವಿರೋಧಿ ಕೆಲಸದಲ್ಲಿ ಭಾಗಿಯಾಗಿದ್ದರು. ಇದರಿಂದ ಮುಂದಿನ ಆರು ತಿಂಗಳವರೆಗೆ ಇವರ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಉಪಾಧ್ಯಾಯರನ್ನು ಈ ಹಿಂದೆ ಶಿಸ್ತು ಕ್ರಮ ಮೇರೆಗೆ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿತ್ತು. ಈ ಬಗ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಜನವರಿ 26 ರಂದು ಕಿಶೋರ್ ಉಪಾಧ್ಯಾಯ ಅವರಿಗೆ ಪತ್ರ ಬರೆದಿದೆ.
Advertisement
Former Congress Chief of Uttarakhand, Kishore Upadhyay expelled from the party for 6 years for “anti-party activities”. He was earlier removed from all posts as a disciplinary action.
(File photo) pic.twitter.com/VDb3m9RPEk
— ANI (@ANI) January 27, 2022
Advertisement
ಪತ್ರದಲ್ಲಿ ಏನಿದೆ?: ಈ ಹಿಂದೆ ಪಕ್ಷ ಹಲವು ಎಚ್ಚರಿಕೆಯನ್ನು ನೀಡಿತ್ತು. ಆದರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ನಿಮ್ಮನ್ನು ತಕ್ಷಣದಿಂದಲೇ ಹೊರಹಾಕಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ನೈಟ್ ಕರ್ಫ್ಯೂ ನಡುವೆ ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ
Advertisement
Former Congress Chief of Uttarakhand, Kishore Upadhyay expelled from the party for 6 years for “anti-party activities”. pic.twitter.com/DBAfZAQKl8
— ANI (@ANI) January 27, 2022
Advertisement
ಕಿಶೋರ್ ಉಪಾಧ್ಯಾಯ ಅವರು 2014 ರಿಂದ 2017 ರವರೆಗೆ ಕಾಂಗ್ರೆಸ್‍ನ ಉತ್ತರಾಖಂಡ ಘಟಕದ ಅಧ್ಯಕ್ಷರಾಗಿದ್ದರು. ಮೂಲಗಳ ಪ್ರಕಾರ ಶೀಘ್ರದಲ್ಲೇ ಬಿಜೆಪಿಯನ್ನು ಸೇರಲಿದ್ದಾರೆ. ಉಪಾಧ್ಯಾಯ ಅವರು ತೆಹ್ರಿ ಕ್ಷೇತ್ರದಿಂದ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಮನೆಯ ಹೊರಗೆ ಎಸೆದ – ಆರೋಪಿ ಅರೆಸ್ಟ್