– ಆಗಂತುಕ ಶೂಟರ್‌ನನ್ನು ಹತ್ಯೆ ಮಾಡಿದ ಸಿಬ್ಬಂದಿ
ನ್ಯೂಯಾರ್ಕ್: ಪೆನ್ಸಿಲ್ವೇನಿಯಾದಲ್ಲಿ ನಡೆದ ರ‍್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಯಿಂದ ಟ್ರಂಪ್ ಸ್ವಲ್ಪದರಲ್ಲೇ ಪಾರಾಗಿದ್ದು, ಕಿವಿಗೆ ಗಾಯವಾಗಿದೆ.
Advertisement
Trump got shot in the side of the head at his rally in Pennsylvania pic.twitter.com/5xtwgRscOr
— Hodgetwins (@hodgetwins) July 13, 2024
Advertisement
ಯುಎಸ್ ಮಾಜಿ ಅಧ್ಯಕ್ಷರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿ ವೇದಿಕೆಯಿಂದ ತಕ್ಷಣವೇ ವೇದಿಕೆಯಿಂದ ಸ್ಥಳದಿಂದ ಹೊರಗಡೆ ಕರೆದೊಯ್ದರು. ಭಯಾನಕ ಘಟನೆ ಸಂಭವಿಸಿದ ಕ್ಷಣದ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನೇಪಾಳದ ಹೆದ್ದಾರಿಯಲ್ಲಿ ಭೂಕುಸಿತ – ಬಸ್‍ಗಳಲ್ಲಿದ್ದ 6 ಮಂದಿ ಭಾರತೀಯರು ಸೇರಿ 65 ಪ್ರಯಾಣಿಕರು ಕಣ್ಮರೆ
Advertisement
Advertisement
ಟ್ರಂಪ್ ಅವರು ಬೆಂಬಲಿಗರ ದೊಡ್ಡ ಗುಂಪಿನ ನಡುವೆ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಶಬ್ದ ಕೇಳಿಬಂದಿದೆ. ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದು ರಕ್ಷಿಸಿ ವೇದಿಕೆಯಿಂದ ಹೊರಕರೆತಂದರು. ಈ ವೇಳೆ ಟ್ರಂಪ್ ಕಿವಿಯಲ್ಲಿ ರಕ್ತಸ್ರಾವವಾಗಿತ್ತು.
ಶೂಟರ್‌ನನ್ನು ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶೂಟರ್ ಜೊತೆಗೆ ಮತ್ತೊಬ್ಬ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪದವಿ ಕಾರ್ಯಕ್ರಮದಲ್ಲಿ Free Palestine ಘೋಷಣೆ – ಯುಎಇಯಿಂದ ವಿದ್ಯಾರ್ಥಿ ಗಡಿಪಾರು
ತಮ್ಮ ರಾಜಕೀಯ ಪ್ರತಿಸ್ಪರ್ಧಿಯ ಮೇಲಿನ ದಾಳಿಯನ್ನು ಯುಎಸ್ ಅಧ್ಯಕ್ಷ ಜೋ ಬೈಡೆನ್ ಖಂಡಿಸಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಯಾವುದೇ ಜಾಗವಿಲ್ಲ. ಅದನ್ನು ಖಂಡಿಸಲು ನಾವು ಒಂದಾಗಬೇಕು. ಟ್ರಂಪ್ ಸುರಕ್ಷಿತವಾಗಿದ್ದಾರೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಬೈಡೆನ್ ತಿಳಿಸಿದ್ದಾರೆ.