ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್(75) ಅವರನ್ನು ರಕ್ತ ಸೋಂಕಿನ ಕಾರಣದಿಂದ ಕ್ಯಾಲಿಫೋರ್ನಿಯಾದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
Advertisement
ಕ್ಯಾಲಿಫೋರ್ನಿಯಾದ ಇರ್ವಿನ್ ಮೆಡಿಕಲ್ ಸೆಂಟರ್‌ನಲ್ಲಿ ಬಿಲ್ ಕ್ಲಿಂಟನ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುವ ಪ್ರಕಾರ, ಕ್ಲಿಂಟನ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟಿದ್ದು, ಪರ್ಸನಲ್ ಆಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಉಸಿರಾಟದ ಸಮಸ್ಯೆಗಳಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಬಿಲ್ ಕ್ಲಿಂಟನ್ ಅವರನ್ನು ಕೋವಿಡ್-19 ಹೊರತಾದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 85 ವರ್ಷದ ಅಜ್ಜಿಗೆ ಒಲಿದುಬಂತು ಪಂಚಾಯತ್ ಅಧ್ಯಕ್ಷೆ ಸ್ಥಾನ
Advertisement
“Former US President Bill Clinton has been admitted to a hospital in Irvine California,” reports Reuters
(file photo) pic.twitter.com/rCrLKdrcKz
— ANI (@ANI) October 15, 2021
Advertisement
ಈ ಕುರಿತಂತೆ ಕ್ಲಿಂಟನ್ ವಕ್ತಾರ ಏಂಜೆಲ್ ಯುರೇನಾ ಟ್ವಿಟ್ಟರ್‌ನಲ್ಲಿ, ಕ್ಲಿಂಟನ್ ಅವರ ಮನಸ್ಥಿತಿ ಉತ್ತಮವಾಗಿದೆ. ಅವರಿ ಆರೈಕೆ ಅತ್ಯುತ್ತಮವಾಗಿ ಆರೈಕೆ ಮಾಡುತ್ತಿರುವ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು
Advertisement
Statement from President Clinton’s physicians pic.twitter.com/kQ4GDOxBcU
— Angel Ureña (@angelurena) October 15, 2021
ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಅಲ್ಪೇಶ್ ಅಮೀನ್ ಮತ್ತು ಡಾ. ಲಿಸಾ ಬಾರ್ಡಾಕ್ ಅವರು, ಕ್ಲಿಂಟನ್ ಅವರನ್ನು “ಆರೋಗ್ಯ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆರೋಗ್ಯವಾಗಿದ್ದಾರೆ. “ಎರಡು ದಿನಗಳ ಚಿಕಿತ್ಸೆಯ ನಂತರ, ಅವರ ಬಿಳಿ ರಕ್ತ ಕಣಗಳ ಎಣಿಕೆ ಕಡಿಮೆಯಾಗುತ್ತಿದೆ ಮತ್ತು ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.” ಆದಷ್ಟು ಬೇಗ ಅವರು ಗುಣಮುಖರಾಗಿ ಮನೆಗೆ ಹಿಂದಿರುಗುತ್ತಾರೆ ಎಂದು ನಾವು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
Statement, from me, on President Clinton pic.twitter.com/Jbfl4evpcF
— Angel Ureña (@angelurena) October 15, 2021