ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ನಿರ್ಬಂಧ ಹೇರಿದ ರಷ್ಯಾ

Public TV
1 Min Read
Barack Obama

ಮಾಸ್ಕೋ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (US President Barack Obama) ಸೇರಿದಂತೆ 500 ಅಮೆರಿಕನ್ನರಿಗೆ ಪ್ರವೇಶವನ್ನು ನಿರ್ಬಂಧಿಸಿ ರಷ್ಯಾ (Rsussia) ಆದೇಶ ಪ್ರಕಟಿಸಿದೆ.

ಜೋ ಬೈಡನ್‌ (Joe Biden) ಆಡಳಿತ ನಿರಂತರವಾಗಿ ರಷ್ಯಾದ ಮೇಲೆ ವಿಧಿಸುತ್ತಿರುವ ನಿರ್ಬಂಧಗಳಿಗೆ ಪ್ರತಿಯಾಗಿ ಅಮೆರಿಕದ 500 ಮಂದಿಗೆ ರಷ್ಯಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.  ಇದನ್ನೂ ಓದಿ: ಕುರಿ ಲೆಕ್ಕ ಹಾಕಲು ಬಾರದವನಿಗೆ ಹಣಕಾಸು ಖಾತೆ ಯಾಕೆ ಎಂದಿದ್ದವರಿಗೆ 13 ಬಜೆಟ್‌ ಮಂಡಿಸಿ ಠಕ್ಕರ್‌ ಕೊಟ್ಟ ‘ಟಗರು’!

Vladimir Putin

ಉಕ್ರೇನ್‌ (Ukraine) ಮೇಲೆ ದಾಳಿ ಮಾಡುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಕುಗ್ಗಿಸಲು ಅಮೆರಿಕ ಮತ್ತು ಯುರೋಪ್‌ ದೇಶಗಳು ನಾನಾ ಕ್ರಮಗಳನ್ನು ಜಾರಿ ಮಾಡುತ್ತಿವೆ. ಈ ಕ್ರಮದ ಭಾಗವಾಗಿ ಶುಕ್ರವಾರ ಅಮೆರಿಕ ರಷ್ಯಾದ ನೂರಕ್ಕೂ ಅಧಿಕ ಕಂಪನಿಗಳನ್ನು ವ್ಯಕ್ತಿಗಳನ್ನು ನಿರ್ಬಂಧ ಪಟ್ಟಿಗೆ ಸೇರಿಸಿದೆ. ಈ ಕ್ರಮಕ್ಕೆ ತಿರುಗೇಟು ಎನ್ನುವಂತೆ ರಷ್ಯಾ ಈಗ ಅಮೆರಿಕದ 500 ಮಂದಿಗೆ ನಿರ್ಬಂಧ ಹೇರಿದೆ.

 
ಏಪ್ರಿಲ್‌ನಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ವಿಶ್ವಸಂಸ್ಥೆಗೆ ಪ್ರಯಾಣಿಸುವ ಪತ್ರಕರ್ತರಿಗೆ ವೀಸಾಗಳನ್ನು ನೀಡಲು ಅಮೆರಿಕ ನಿರಾಕರಿಸಿತ್ತು.

Share This Article