ಮಂಗಳೂರು: ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋಲನುಭವಿಸಲಿದೆ ಎಂದು ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಂದ ಕಾಂಗ್ರೆಸ್‍ಗೆ ಉಪಚುನಾವಣೆಯಲ್ಲಿ ಸೋಲಾಗಲಿದೆ. ಸಿಎಂ ಸರಿಯಾಗುವುದಿಲ್ಲ. ಮೊದಲು ಅವರು ಸರಿಯಾದ್ರೆ ಎರಡೂ ಕಡೆಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.
Advertisement
ಶ್ರೀನಿವಾಸ ಪ್ರಸಾದ್ ಅವರು ಒಬ್ಬ ಒಳ್ಳೆಯ ವ್ಯಕ್ತಿತ್ವದ ಮನುಷ್ಯ. ಒಟ್ಟಿನಲ್ಲಿ ನಮ್ಮ ಪಕ್ಷ ಸರಿ ಇದೆ. ಆದ್ರೆ ಈ ಮನುಷ್ಯ ಸರಿ ಇಲ್ಲ. ಹೀಗಾಗಿ ಅವರನ್ನು ಬದಲಾಯಿಸಿದರೆ ಮಾತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಈ ಕಾರಣಕ್ಕಾಗಿಯೇ ನಾನು ಸಿಎಂ ಅವರನ್ನು ಬದಲಾವಣೆ ಮಾಡಿ ಪರಮೇಶ್ವರ್ ಅವರನ್ನು ನೇಮಕ ಮಾಡಿ ಎಂದು ಹೇಳಿಕೊಂಡು ಬಂದಿದ್ದೇನೆ. ಹೈಕಮಾಂಡ್‍ಗೆ ಬೇಕಿದ್ರೆ ನಾನೇ ಹೇಳ್ತೇನೆ. ನಾಳೆಯೇ ಪರಮೇಶ್ವರ್ ಅವರನ್ನು ಸಿಎಂ ಆಗಿ ನೇಮಕ ಮಾಡಿದರೆ ಎಲ್ಲವೂ ಸರಿಯಾಗತ್ತೆ. ಎರಡು, ಮೂರು ವರ್ಷ ಸಿದ್ದರಾಮಯ್ಯ ಆಡಳಿತ ನಡೆಸಿದ್ದು ಸಾಕು ಅಂತಾ ಸಿಎಂ ಮೇಲಿನ ಅಸಮಾಧಾನವನ್ನು ಪೂಜಾರಿ ಮತ್ತೊಮ್ಮೆ ಹೊರಹಾಕಿದ್ರು.
Advertisement
ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹಿರಿಯರು, ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಅಸಮಾಧಾನ ಆಗಿದ್ದರೆ ಸಿಎಂ ಸಿದ್ದರಾಮಯ್ಯನವರು ಅವರ ಬಳಿ ಹೋಗಿ ಮಾತನಾಡಬಹುದಿತ್ತು. ಅಸಮಾಧಾನ ಬಗೆಹರಿಸಿ, ಬೇರೆ ಪಕ್ಷಕ್ಕೆ ಹೋಗದಂತೆ ತಡೆಯಬಹುದಿತ್ತು. ಆದರೆ ಸಿದ್ದರಾಮಯ್ಯ ಈ ಕೆಲಸ ಮಾಡಲಿಲ್ಲ. ಕೃಷ್ಣ ಬಿಜೆಪಿ ಸೇರುವುದಿದ್ದರೆ ಅದಕ್ಕೆ ಸಿಎಂ ಮೂಲ ಕಾರಣ ಎಂದು ವಾಗ್ದಾಳಿ ನಡೆಸಿದರು.