ನವದೆಹಲಿ: ಇಂದು ರಾಜಕಾರಣದಿಂದ ಸನ್ಯಾಸವನ್ನು ತೆಗೆದುಕೊಳ್ಳುತ್ತಿದ್ದೇನೆ, ಬಿಜೆಪಿಯನ್ನು ತೊರೆದಿದ್ದೇನೆ ಎಂದು ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ಕಳೆದ ಜನವರಿ 30 ರಂದು ಸ್ಥಾಪಿಸಿದ ‘ರಾಷ್ಟ್ರ ಮಂಚ್’ನ ಮೊದಲ ಸಭೆಯಲ್ಲಿ ಮಾತನಾಡಿದ ಸಿನ್ಹಾ, ಕೇಂದ್ರದ ಎನ್‍ಡಿಎ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ಅಶಕ್ತಗೊಳಿಸುತ್ತಿದೆ. ಈ ಬಾರಿಯ ಬಜೆಟ್ ಕಲಾಪ ಹಾಳಾಯ್ತು. ಹಾಗಾಗಿ ಬಿಜೆಪಿಯೊಂದಿಗಿನ ದೀರ್ಘಕಾಲದ ಸಂಬಂಧವನ್ನು ತೊರೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಇನ್ನು ಮುಂದೆ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕೆಲಸ ಮಾಡುತ್ತೇನೆ. ಬರುವ ದಿನಗಳಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇನೆ. ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ, ಪಕ್ಷಾಧಾರಿತ ರಾಜಕೀಯ ಮಾಡುವುದಿಲ್ಲ, ಯಾವುದೇ ಉನ್ನತ ಹುದ್ದೆಯ ಆಕಾಂಕ್ಷಿಯಲ್ಲ ಎಂದು ತಿಳಿಸಿದರು.
Advertisement
ಇದೇ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸಾರ್ವಜನಿಕ ಹಿತಾಸಕ್ತಿ ಇಲ್ಲದ ಕೇಂದ್ರದ ಯೋಜನೆಗಳ ವಿರುದ್ಧ ರಾಷ್ಟ್ರ ಮಂಚ್ ಇನ್ನು ಮುಂದೆ ಹೋರಾಡಲಿದೆ. ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರಿಗೆ ಮೌನ ಮುರಿಯುವಂತೆ ಆಗ್ರಹಿಸಿದರು.