Connect with us

ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಮಾಜಿ ಅಂಡರ್ 19 ಆಟಗಾರ

ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಮಾಜಿ ಅಂಡರ್ 19 ಆಟಗಾರ

ಮುಂಬೈ: ಕುಡಿದ ಮತ್ತಿನಲ್ಲಿ ಯುವಕನೊಬ್ಬ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರ್ಮ್‍ಗೆ ಕಾರು ನುಗ್ಗಿಸಿದ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ 25 ವರ್ಷದ ಯುವಕ ಹರ್ಮೀತ್ ಸಿಂಗ್ ಅಂಧೇರಿ ರೈಲ್ವೆ ವಿಲ್ದಾಣಕ್ಕೆ ಕಾರು ನುಗಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇಂದು ಬೆಳಿಗ್ಗೆ 7.15ರ ವೇಳೆಗೆ ನಿಲ್ದಾಣದಲ್ಲಿ ಪ್ರಯಾಣಿಕರು ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಹರ್ಮೀತ್ ಸಿಂಗ್ ತನ್ನ ಹೂಂಡೇ ಕಾರನ್ನ ಪ್ಲಾಟ್‍ಫಾರ್ಮ್ ನಂಬರ್ 1ಕ್ಕೆ ನುಗ್ಗಿಸಿದ್ದಾನೆ. ವೇಗವಾಗಿ ಕಾರು ಬಂದಿದ್ದನ್ನು ನೋಡಿ ಜನ ಗಾಬರಿಗೊಂಡಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಗಲಾಟೆ ಕೂಡ ನಡೆದಿದೆ.

ಸದ್ಯಕ್ಕೆ ಮುಂಬೈ ಪೊಲೀಸರು ಹರ್ಮೀತ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹರ್ಮೀತ್‍ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

ಹರ್ಮೀತ್ ಅಂಡರ್ 19 ಕ್ರಿಕೆಟ್ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.

Advertisement
Advertisement