ಉಡುಪಿ: ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿಯ ಮಾಜಿ ಶಾಸಕ ಯುಆರ್ ಸಭಾಪತಿ (U.R.Sabhapathi) ಭಾನುವಾರ ನಿಧನರಾಗಿದ್ದಾರೆ.
1980-1990ರ ದಶಕದಲ್ಲಿ ಕರಾವಳಿಯ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಯುಆರ್ ಸಭಾಪತಿ (71) ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಇವರು ಉಡುಪಿ (Udupi) ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಕೆಸಿಪಿಯಿಂದ (KCP) ಶಾಸಕರಾಗಿದ್ದ ಇವರು 1999ರಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಪ್ರೀತಿಯ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ Rado ವಾಚ್ ಗಿಫ್ಟ್
ಬಂಗಾರಪ್ಪನವರ ಅನುಯಾಯಿಯಾಗಿದ್ದ ಸಭಾಪತಿ, ಆಸ್ಕರ್ ಫರ್ನಾಂಡಿಸ್ ರಾಜಕೀಯ ಪ್ರವೇಶಕ್ಕೂ ಪ್ರೇರಣೆಯಾಗಿದ್ದರು. ಅಷ್ಟೇ ಅಲ್ಲದೇ ರಾಷ್ಟ್ರೀಯ ಜನತಾದಳ ಮತ್ತು ಜಾತ್ಯಾತೀತ ಜನತಾದಳದೊಂದಿಗೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮತದಾರರಿಗೆ ಅವಮಾನ ಮಾಡಿದೆ – ಸಿಎಂ, ಡಿಸಿಎಂ ಕ್ಷಮೆಗೆ ಆಗ್ರಹಿಸಿದ ಈಶ್ವರಪ್ಪ