ಗದಗ: ವೋಲ್ವೋ ಬಸ್ ಪುನಃ ಆರಂಭಿಸುವಂತೆ ಟೀಂ ಇಂಡಿಯಾದ(Team India) ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ (Sunil Joshi) ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ (Bengaluru) ಗದಗ ನಗರಕ್ಕೆ ವೋಲ್ವೋ ಬಸ್ (Volvo Bus) ಸೇವೆಯನ್ನು ಪುನರಾರಂಭಗೊಳಿಸುವಂತೆಸಿಎಂ ಸಿದ್ದರಾಮಯ್ಯ (CM Siddaramaiah), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ (H. K. Patil ) ಅವರಿಗೆ ಎಕ್ಸ್ನಲ್ಲಿ ಟ್ಯಾಗ್ ಮಾಡುವ ಮೂಲಕ ಜೋಷಿ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ:
Advertisement
ನಿರೀಕ್ಷೆಯಿಲ್ಲದೆ ಬೆಂಗಳೂರುದಿಂದ ಗದಗಕ್ಕೆ ಹೋಗುವ ವೋಲ್ವೋ ಬಸ್ ಸೇವೆಯನ್ನು ರದ್ದುಗೊಳಿಸಲಾಗಿದೆ, ಮತ್ತು ಇದಕ್ಕೆ ಯಾವುದೇ ವಿವರ ನೀಡಲಾಗಿಲ್ಲ. ಕರಾವರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ, ಈ ವಿಷಯದಲ್ಲಿ ತಕ್ಷಣವೇ ಚರ್ಮಿಸಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಹಕಾರ ತುಂಬಾ ಮೆಚ್ಚುಗೆಯಾಗುತ್ತದೆ.
pic.twitter.com/SJW8K22b3h
— Sunil Joshi | 🇮🇳 ಸುನಿಲ್ ಜೋಶಿ (@SunilJoshi_Spin) August 18, 2024
Advertisement
ನಮ್ಮ ಶಾಶಕರಾದ HK Patil sir & Transport ಶಾಶಕರಾದ ಹಾಗು ಮಂತ್ರಿಯಾದ ಶ್ರೀ Ramalinga Reddy sir ದಯವಿಟ್ಟು ಈ ಬಸ್ ಅನ್ನು ಮತ್ತೆ ಶುರುಮಡಿ ಅಂತ ವಿನಂತಿಯಿಂದ ಕೇಳಿಕುಳ್ಳುತ್ತೇನೆ.🇮🇳🙏🏾 ಜೈ ಕನಾಟಕ @CMofKarnataka @RLR_BTM @HKPatilINC pic.twitter.com/fspc9nFwHO
— Sunil Joshi | 🇮🇳 ಸುನಿಲ್ ಜೋಶಿ (@SunilJoshi_Spin) August 18, 2024
Advertisement
ಬೆಂಗಳೂರಿನಿಂದ ಗದಗಕ್ಕೆ (Gadag) ಹೋಗುವ ವೋಲ್ವೋ ಬಸ್ ಸೇವೆಯನ್ನು ರದ್ದುಗೊಳಿಸಲಾಗಿದೆ ಮತ್ತು ಇದಕ್ಕೆ ಯಾವುದೇ ವಿವರ ನೀಡಲಾಗಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ, ಈ ವಿಷಯದಲ್ಲಿ ತಕ್ಷಣವೇ ಚರ್ಚಿಸಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಹಕಾರ ತುಂಬಾ ಮೆಚ್ಚುಗೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ದಯವಿಟ್ಟು ಈ ಬಸ್ ಅನ್ನು ಮತ್ತೆ ಶುರುಮಾಡಿ ಎಂದು ವಿನಂತಿಯಿಂದ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ:
Advertisement
2023ರ ಜನವರಿ 9 ರಂದು ಸಾರಿಗೆ ಸಚಿವರಾಗಿದ್ದ ಶ್ರೀರಾಮಲು ಅವರು ಬೆಂಗಳೂರಿನಿಂದ ಗದಗಕ್ಕೆ ವೋಲ್ವೋ ಬಸ್ ಸೇವೆಯನ್ನು ಆರಂಭಿಸಿದ್ದರು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1 ರಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಸಂಜೆ 6.15ಕ್ಕೆ ಗದಗ ತಲುಪುತ್ತಿತ್ತು. ಆದರೆ ಈಗ ಈ ಬಸ್ಸು ಸೇವೆಯನ್ನು ರದ್ದುಗೊಳಿಸಲಾಗಿದೆ. ಬಸ್ ಸೇವೆ ರದ್ದಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.