ಕೋಲಾರ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ರ ಬರೆದಿದ್ದಾರೆ.
ರೋಹಿತ್ ಚಕ್ರತೀರ್ಥರನ್ನು ಮರು ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ನೋವಿನ ಸಂಗತಿ. ಮಹಾನ್ ಚೇತನ ಕುವೆಂಪು ಬಗ್ಗೆ ಅಗೌರವ ತೋರಿಸಿರುವ ಈ ವಿಕೃತರು ಸಮಿತಿಯ ಅಧ್ಯಕ್ಷರಾಗಿರುವುದು ಬೇಸರದ ವಿಷಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾರಿಗೆ ದುಡ್ಡು ಜಾಸ್ತಿ ಇರುತ್ತೋ ರಾಜ್ಯಸಭೆ ಆರಿಸಿ ಬರ್ತಾರೆ: ಬಸವರಾಜ್ ಹೊರಟ್ಟಿ
ಗಾಂಧೀಜಿಯನ್ನ ಬಲಿ ಪಡೆದ ದೇಶ ಭಕ್ತರಿಗೆ ಸಹಜವಾಗಿಯೇ ಕೇಶವ ಬಲಿರಾಮ್ ಹೆಗ್ಗಡೆರವರು ಸ್ವತಂತ್ರ್ಯ ಹೋರಾಟಗಾರರಾಗಿ ಕಾಣಿಸುವುದು ತಪ್ಪೇನಿಲ್ಲ. ಪ್ರಾಥಮಿಕ ಹಂತದ ಪಠ್ಯಪುಸ್ತಕದಲ್ಲಿ ವಿಷ ಪ್ರಸಾಹನ ಮಾಡಲು ಹೊರಟಿದ್ದಾರೆ. ಚಕ್ರತೀರ್ಥರಿಗೆ, ಚಕ್ರವರ್ತಿಗಳಿಗೆ, ಪ್ರತಾಪ ಸಿಂಹ ಅವರಿಗೆ ಜಗತ್ತಿನ ಇತಿಹಾಸದ ಅರಿವು ಇದಿಯೋ ಇಲ್ಲವೋ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ಸಂವಿಧಾನದ ಆಶಯಗಳನ್ನ ಗೌರವಿಸುವ ದೃಷ್ಠಿಯಿಂದ ಮುಖ್ಯಮಂತ್ರಿಗಳು ಇತಿಶ್ರೀ ಹಾಡಬೇಕಿದೆ. ಹೀಗೆ ಹಲವು ವಿಚಾರಗಳ ಕುರಿತು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.