ಕೋಲಾರ: ರಾಯಲಸೀಮ ಶ್ರೀನಿವಾಸಪುರದಲ್ಲಿ ಮತ್ತೆ ಸಂಪ್ರದಾಯ ಬದ್ಧ ವೈರಿಗಳ ಕಾಳಗ ಶುರುವಾಗಿದೆ. ಜೆಡಿಎಸ್ನ ಮಾಜಿ ಶಾಸಕ ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.
ವಿಧಾನಸೌಧದಲ್ಲಿ ಒಂದು ತಿಂಗಳ ಹಿಂದಯೆ ಸುದ್ದಿಗೋಷ್ಠಿ ನಡೆಸಿದ್ದ ಜೆ.ಕೆ.ವೆಂಕಟಶಿವಾರೆಡ್ಡಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದ ಜೆಎಂಎಫ್ಸಿ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.
Advertisement
Advertisement
ವಕೀಲರಾದ ಶಂಕರಪ್ಪ ಹಾಗೂ ಸುಂದರ್ ಅವರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀನಿವಾಸಪುರದ ಜೆಎಂಎಫ್ಸಿ ಕೋರ್ಟ್ ಗೆ ಆಗಮಿಸಿದ ರಮೇಶ್ ಕುಮಾರ್ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ವಿಶೇಷವೆಂದರೆ ಜೆಡಿಎಸ್ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಗಲಾಗಿದ್ದಾರೆ.