ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೋಳಿವಾಡ ಅವರು, ಕಾಂಗ್ರೆಸ್ಸಿಗೆ ಈ ಪರಿಸ್ಥಿತಿ ಬರಬೇಕಾದರೆ ಮೂಲಕ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತು, ಬೇರೆ ಯಾರು ಅಲ್ಲ. ಸಿದ್ದರಾಮಯ್ಯ ಅವರ ನಡೆದ ಕಾಂಗ್ರಸ್ಸಿಗೆ ತಟ್ಟಿದೆ. ನಾನು ಅಧಿಕಾರಕ್ಕೆ ಬಂದು 13 ವರ್ಷ ಆದ ಮೇಲೆ ಎಂಎಲ್‍ಎ ಆದೆ. ಆದ್ದರಿಂದ ಅವರು ನನ್ನ ಮುಂದೆ ಚೋಟಾ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿ ಕೆಲವರಿಗೆ ಮೈತ್ರಿ ಸರ್ಕಾರ ಮುಂದುವರಿಯುವುದು ಬೇಕಿದೆ. ಆದರೆ ಕೆಲ ಕಾಂಗ್ರೆಸ್ ಮುಖಂಡರಿಗೆ ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಬೇಕಿಲ್ಲ. ಹೈಕಮಾಂಡ್ ತೀರ್ಮಾನದಂತೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದು ಹೇಳಿದರು.
Advertisement
ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕೆಲ ಕಾಂಗ್ರೆಸ್ ನಾಯಕರು ಕಾರಣ ಎಂಬ ಕೋಳಿವಾಡ ಹೇಳಿಕೆ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.
Advertisement
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇದು ಕುಮಾರಸ್ವಾಮಿಯವರ ಪಕ್ಷದ ವಿಚಾರ. ನಾನು ಈ ಬಗ್ಗೆ ಏನು ಕಮೆಂಟ್ ಮಾಡಲು ಹೋಗುವುದಿಲ್ಲ. ಅವರ ಪಕ್ಷದ ವೇದಿಕೆಯಲ್ಲಿ ಅವರೇ ಮಾತನಾಡಿಕೊಳ್ಳುತ್ತಾರೆ. ಮೈತ್ರಿ ಸರ್ಕಾರ ಅಂದಮೇಲೆ ಸಣ್ಣಪುಟ್ಟ ಸಮಸ್ಯೆ ಇರುತ್ತೆ. ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ. ನಾವು ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಒಂದು ಸರ್ಕಾರವನ್ನು ನಡೆಸಬೇಕಾದರೆ ಸಮನ್ವಯ ಇರಬೇಕು. ಆದರೆ ಕಾಂಗ್ರೆಸ್ ಪಕ್ಷ ಈ ಸಮ್ಮಿಶ್ರ ಸರ್ಕಾರಕ್ಕೆ ಎಲ್ಲಾ ರೀತಿ ಸಹಕಾರ ಕೊಡುತ್ತಿದೆ ಎಂದು ಹೇಳಿದರು.
Advertisement
https://www.youtube.com/watch?v=VOBLDO5wpEA