ಹುಬ್ಬಳ್ಳಿ: ಹಿಜಬ್ ವಿವಾದ ಈಗ ಸಿಜೆಐ (CJI)ಗೆ ಹೋಗಿರುವುದರಿಂದ ಸರ್ಕಾರ ಯಾವುದೇ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳೇ ಅಂತಿಮ ನಿರ್ಧಾರದ ಮೂಲಕ ತೀರ್ಪನ್ನು ನೀಡಬೇಕಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.
ಹಿಜಬ್ (Hijab) ಕುರಿತು ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠದ ತೀರ್ಪಿನ ಕುರಿತು ನಗರದಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಲಯ ತೀರ್ಪು ಕೊಟ್ಟು ಪುನಃ ಸಿಜೆಐಗೆ ಒಪ್ಪಿಸಿದೆ ಅಂದರೆ ಕೇಸ್ ಇನ್ನೂ ಪೆಂಡಿಂಗ್ ಇದೆ ಅಂತ ಅರ್ಥ. ಈಗ ಸಿಜೆಐ ಬಳಿಗೆ ಅಲ್ಲಿ ಅಂತಿಮ ತೀರ್ಮಾನ ಕೈಗೊಂಡ ಮೇಲೆಯೇ ಹಿಜಬ್ ವಿವಾದಕ್ಕೆ ತೆರೆ ಬಿಳಲಿದೆ. ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡಿ ಹಾಗೇ ಬಿಟ್ಟಿದ್ದರೇ ಮುಂದಿನ ಹಂತದಲ್ಲಿ ಸರ್ಕಾರ ಏನಾದರೂ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಈಗ ಕೋರ್ಟ್ ಸಿಜೆಐಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಹಿಜಬ್ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?
ಈಗಾಗಲೇ ಹಿಜಬ್ ಕುರಿತು ದ್ವಿ ಸದಸ್ಯ ಪೀಠ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು, ಸಿಜೆಐಗೆ ಒಪ್ಪಿಸಿದೆ. ಸಿಜೆಐ ಈ ಪ್ರಕರಣದ ಆಳಗಲವನ್ನು ಅಧ್ಯಯನ ಮಾಡಿ ತೀರ್ಪನ್ನು ನೀಡಲಿದೆ. ಅಲ್ಲಿಯವರೆಗೆ ಕಾಯಬೇಕು ಅಷ್ಟೇ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.