ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಿಡಿಕಾರಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜನರೇ ಈ ಭ್ರಷ್ಟ ಅಭ್ಯರ್ಥಿಗಳಿರುವ ಪಕ್ಷಕ್ಕೆ ಮತ ಹಾಕಬೇಡಿ ನೋಟಾ ಚಲಾವಣೆ ಮಾಡಿ ಅಂತ ಸಲಹೆ ನೀಡಿದ್ದಾರೆ.
Advertisement
ಕಾಂಗ್ರೆಸ್-ಬಿಜೆಪಿ ಜಗಳಾಟ ಕೇವಲ ಮೇಲುನೋಟಕ್ಕೆ ಅಷ್ಟೇ. ಯಡಿಯೂರಪ್ಪ ಮೇಲೆ ಮತ್ತೆ ಸಿಎಂ ಮೇಲ್ಮನವಿ ಹಾಕಬೇಕಿತ್ತು. ಇವರೆಲ್ಲ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಕೊಡುವವರು ಅಂತ ಹೆಗ್ಡೆ ಕಿಡಿಕಾರಿದ್ದಾರೆ.
Advertisement
Advertisement
ಭ್ರಷ್ಟಾಚಾರ ಹಾಗೂ ಇನ್ನಿತರ ಪ್ರಕರಣಗಳ ಆರೋಪವಿರುವ ವ್ಯಕ್ತಿಗಳಿಗೆ ಮತದಾರರು ಮತ ಹಾಕಬಾರದು. ಮತ ಹಾಕಿ ಅವರನ್ನು ಗೆಲ್ಲಿಸಿದ್ರೆ, ಆ ಮತದಾರರ ವಿರುದ್ಧವೂ ಒಂದು ಆರೋಪ ವ್ಯಕ್ತವಾಗುತ್ತದೆ. ಯಾಕಂದ್ರೆ ಭ್ರಷ್ಟಾಚಾರದ ಬಗ್ಗೆ ಯಾವುದೇ ಒಂದು ಕಾಳಜಿ ಇಟ್ಟುಕೊಂಡಿಲ್ಲ. ನಿಮಗೆ ಗೆದ್ದ ಅಭ್ಯರ್ಥಿಯಿಂದ ಯಾವುದಾದರೂ ಲಾಭವಿದೆ ಅನ್ನೋ ಒಂದೇ ಒಂದು ಕಾರಣದಿಂದ ಮತ ಹಾಕುತ್ತಿದ್ದೀರಿ. ಒಂದು ವೇಳೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಾದ್ರು ಕೂಡ ಒಳ್ಳೆಯವರು ಇಲ್ಲ ಅಂತ ಬಂದ್ರೆ ದಯವಿಟ್ಟು ನೋಟಾ ಚಲಾಯಿಸಿ. ಅವಾಗ ರಾಜಕೀಯ ನಾಯಕರುಗಳಿಗೆ ಒಂದು ಸಂದೇಶ ಹೋಗುತ್ತದೆ. ಒಳ್ಳೆಯವರನ್ನು ಚುನಾವಣೆಗೆ ನಿಲ್ಲಿಸದೇ ಇದ್ದರೆ, ಇನ್ನು ಮುಂದೆ ಮತದಾರರು ಯಾವುದೇ ಮತ ಹಾಕಲ್ಲ ಅಂತ ತಿಳಿಸಿದ್ದಾರೆ.
Advertisement
ಭ್ರಷ್ಟಾಚಾರ ಆರೋಪ ಇಲ್ಲದಂತಹ ಪಕ್ಷಗಳು ಯಾವುದಿವೆ? ಹಲವಾರು ಅಭ್ಯರ್ಥಿಗಳ ವಿರುದ್ಧ ಗಂಭೀರ ಆರೋಪಗಳಿವೆ. ಕೆಲವರ ಮೇಲೆ ಅತ್ಯಾಚಾರದ ಆರೋಪವಿದೆ. ಕೆಲವರ ಮೇಲೆ ಅಕ್ರಮ ಗಣಿಕಾರಿಕೆ ಮಾಡಿದ ಆರೋಪವಿದೆ. ಇಂತಹ ಹಲವಾರು ಆರೋಪಗಳು ಎರಡೂ ಪಕ್ಷದ ಅಭ್ಯರ್ಥಿಗಳ ಮೇಲಿದೆ. ನನಗೆ ತಿಳಿದ ಮಟ್ಟಿಗೆ ಲೋಕಸಭೆಯಲ್ಲಿರೋ ಸುಮಾರು 545 ಸದಸ್ಯರಲ್ಲಿ ಸುಮಾರು ಶೇ.30ರಷ್ಟು ಜನ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಅಥವಾ ಅವರ ವಿರುದ್ಧ ಇನ್ಯಾವುದೋ ಕ್ರಿಮಿನಲ್ ಕೇಸ್ ಗಳಿವೆ. ಇಂತಹ ವ್ಯಕ್ತಿಗಳು ರಾಜಕೀಯ ಪಕ್ಷಗಳು ಮುಂದೆ ತಂದು ಪ್ರತಿನಿಧಿಗಳಾಗಿ ಮಾಡುವುದು ಸರಿಯಲ್ಲ ಅಂದ್ರು.
ಯಾವ ಪಕ್ಷಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾವುದೇ ಚಿಂತನೆಯಿಲ್ಲ. ಗೆಲ್ಲುವುದು ಒಂದೇ ಒಂದು ಕಾರಣ ಅಂತ ನನಗನ್ನಿಸುತ್ತಿದೆ. ಬಿಜೆಪಿಯಿಂದ ಕಾಂಗ್ರೆಸ್ ಹೋದವರು ಹಾಗೂ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರಲ್ಲಿಯೂ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರು ಇದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಅನ್ನೋದು ಜನರನ್ನು ದಿಕ್ಕು ತಪ್ಪಿಸುವ ವಿಚಾರವಾಗಿದೆ ಅಂತ ಅವರು ಹೇಳಿದ್ರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ಧ ಗಣಿ ವರದಿಯಲ್ಲಿ ಹೆಸರಿದೆ. ಆದರೆ ಅವರನ್ನು ಬರಮಾಡಿಕೊಂಡು ಕಾಂಗ್ರೆಸ್ ನಲ್ಲಿ ಈಗ ಸೀಟ್ ಕೊಟ್ಟಿದ್ದಾರೆ. ಭ್ರಷ್ಟಾಚಾರ ಅನ್ನೋದು ಒಂದು ಆರೋಪವೇ ಅಲ್ಲ. ಅಥವಾ ನಾವು ಕಾನೂನಿಗೆ ಹೆದರುವುದಿಲ್ಲ. ಯಾರಾದ್ರೂ ಗೆಲ್ಲುವಂತಹ ವ್ಯಕ್ತಿಗಳು ಬರಬೇಕು. ಅವರ ಮೇಲೆ ಎಂತಹ ಆರೋಪಗಳಿದ್ದರೂ ಕೂಡ ಅವರಿಗೆ ಸೀಟ್ ಕೊಡುತ್ತೇವೆ ಅನ್ನೋ ಒಂದು ಸಂದೇಶವನ್ನು ಎರಡೂ ಪಕ್ಷದವರು ಸಮಾಜಕ್ಕೆ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.
224 ಅಭ್ಯರ್ಥಿಗಳಲ್ಲಿ ಬಹಳಷ್ಟು ಜನರ ಮೇಲೆ ಬೇರೆ ಬೇರೆ ಆರೋಪಗಳಿವೆ. ಆದ್ದರಿಂದ ಅಂತವರಿಂದ ಟಿಕೆಟ್ ಕೊಡುತ್ತಿರುವುದು, ಯಾವ ಪಕ್ಷಕ್ಕೂ ಕೂಡ ಸತ್ಯ, ಪ್ರಾಮಾಣಿಕತೆ, ನೈತಿಕತೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಯಾರೇ ಆದ್ರೂ ಸರಿ ಗೆಲ್ಲುವಂತಹ ವ್ಯಕ್ತಿಗೆ ಸೀಟ್ ಕೊಡ್ತಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿಯವರನ್ನು ತೆರೆಮರೆ ಅಲ್ಲ ಡೈರೆಕ್ಟ್ ಆಗಿಯೇ ಬಿಜೆಪಿ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಎಲ್ಲಿದೆ ಇವರಿಗೆ ನೈತಿಕತೆ? ಇನ್ನು ರೆಡ್ಡಿ ಬ್ರದರ್ಸ್ ಕೇಳಿದವರಿಗೆ ಬಿಜೆಪಿಯವರು ಟಿಕೆಟ್ ಕೊಟ್ಟಿದ್ದಾರೆ. ಗಣಿಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಮಣೆ ಹಾಕಿದ್ದಾರೆ ಅಂತ ಗರಂ ಆದ್ರು.