ನವದೆಹಲಿ: ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಪಿನಾಕಿ ಚಂದ್ರ ಘೋಷ್ ದೇಶದ ಮೊದಲ ಲೋಕಪಾಲ್ ಆಗಿ ನೇಮಕವಾಗಲಿದ್ದಾರೆ. ಮುಂದಿನ ವಾರ ಅಧಿಕೃತವಾಗಿ ಆದೇಶ ಪ್ರಕಟವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಹಿರಿಯ ವಕೀಲ ಮುಕುಲ್ ರೋಹತ್ಗಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ನಿವೃತ್ತ ನ್ಯಾ.ಪಿ.ಸಿ.ಘೋಷ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಆಯ್ಕೆ ಸಮಿತಿಯ ಮುಂದೆ ಪಿ.ಸಿ.ಘೋಷ್ ಅವರ ಹೆಸರು ಮುಂಚೂಣಿಯಲ್ಲಿತ್ತು ಎನ್ನಲಾಗಿದೆ. ಇದನ್ನು ಓದಿ: ಲೋಕಪಾಲ್ ಆಯ್ಕೆ ಸಮಿತಿ ಸಭೆಯ ವಿಶೇಷ ಆಹ್ವಾನವನ್ನು ತಿರಸ್ಕರಿಸಿದ ಖರ್ಗೆ
Advertisement
Advertisement
ಈ ನಿಟ್ಟಿನಲ್ಲಿ ಘೋಷ್ ಅವರ ನೇಮಕಾತಿ ಸ್ಪಷ್ಟನೆ ಹಾಗೂ ಲೋಕಪಾಲ್‍ನ 8 ಜನ ಸದಸ್ಯರ ಆಯ್ಕೆಯ ಕುರಿತು ಮುಂದಿನ ವಾರ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
Advertisement
ನ್ಯಾ.ಪಿ.ಸಿ.ಘೋಷ್ ಅವರು ನಾಲ್ಕು ವರ್ಷಗಳ ಕಾಲ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಧೀಶರಾಗಿ ಸೇವೆ ಸಲ್ಲಿಸಿ ಮೇ 2017ರಂದು ನಿವೃತ್ತರಾದರು. ಸದ್ಯ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎಂಎಚ್‌ಆರ್‌ಡಿ) ಸದಸ್ಯರಾಗಿದ್ದಾರೆ.