ಜೈಪುರ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಅವರು ಇಂದು ಬೆಳಗ್ಗೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಂಡಿದ್ದರು.
ರಾಜಸ್ಥಾನದ (Rajastan) ಸವಾಯಿ ಮಾಧೋಪುರದಿಂದ ಕಾಂಗ್ರೆಸ್‌ನ ಪಾದಯಾತ್ರೆ ಪುನಾರಂಭವಾದ ಪಾದಯಾತ್ರೆಯಲ್ಲಿ ರಾಜನ್ ಮತ್ತು ರಾಹುಲ್ ಗಾಂಧಿ ಚರ್ಚೆ ನಡೆಸುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
Advertisement
Former Governor of RBI, Dr. Raghuram Rajan joined Rahul Gandhi in today’s #BharatJodoYatra pic.twitter.com/BQax4O0KSF
— Darshnii Reddy ✋???? (@angrybirddtweet) December 14, 2022
Advertisement
ಇಂದಿಗೆ ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಿ 10ನೇ ದಿನವಾಗಿದ್ದು, ಇಂದು ಬಮನ್ವಾಸ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಭಡೋತಿ ಗ್ರಾಮದಿಂದ ಯಾತ್ರೆ ಪುನಾರಂಭವಾಯಿತು. ಇಂದು ಯಾತ್ರೆ 25 ಕಿ.ಮೀ ದೂರ ಕ್ರಮಿಸಲಿದೆ. ಇದನ್ನೂ ಓದಿ: ಮಹಾ-ಕರ್ನಾಟಕ ಗಡಿ ವಿವಾದ; ಇಂದು ಮುಖಾಮುಖಿಯಾಗ್ತಾರೆ ಎರಡೂ ರಾಜ್ಯಗಳ ಸಿಎಂ
Advertisement
अंधेरे से उजाले की दिशा में लेकर जाने का यज्ञ है #BharatJodoYatra
इस यात्रा के स्वागत के लिए सर्द लहर में इंतजार करते लोग अपनी उपस्थिति से इस यज्ञ में आहुति डाल रहे हैं।
देश बचाने का यज्ञ.. pic.twitter.com/21lE340xjZ
— Congress (@INCIndia) December 14, 2022
Advertisement
ಸೆ. 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯು ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದ್ದು, ಇದೀಗ ರಾಜಸ್ಥಾನದಲ್ಲಿ ಮುಂದುವರಿಸಿದೆ. ಮುಂದಿನ ವರ್ಷ ಗಣರಾಜ್ಯೋತ್ಸವದಂದು ಭಾರತ್ ಜೋಡೋ ಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಈಗಾಗಲೇ ಭಾರತ್ ಜೋಡೋ ಯಾತ್ರೆಯಲ್ಲಿ ಮೇಧಾ ಪಾಟ್ಕರ್, ಸ್ವಯಂಘೋಷಿತ ದೇವಮಾನವ ನಾಮದೇವ್ ದಾಸ್ ತ್ಯಾಗಿ, ನಟಿ ಸ್ವರಾ ಭಾಸ್ಕರ್ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಭಾಗವಹಿಸಿದ್ದರು. ಇದನ್ನೂ ಓದಿ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಮಸ್ಕ್ – ನಂ.1 ಯಾರು ಗೊತ್ತಾ?