ರಾಯಚೂರು: ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ (87) ನಿಧನ ಹೊಂದಿದ್ದಾರೆ.
ಇವರು ರಾಯಚೂರಿನ ಅಬ್ದುಲ್ ಸಮದ್ ಸಿದ್ದೀಖಿ (Abdul Samad Siddiqui) 1988-1994ರವರೆಗೆ ರಾಜ್ಯ ಸಭಾ (Rajya Sabha) ಸದಸ್ಯರಾಗಿದ್ದರು. ಅಲ್ಲದೆ ಜಿಲ್ಲೆಯಲ್ಲಿ ಜನತಾದಳ ಪಕ್ಷ ಕಟ್ಟಲು ಮುಂದಾಳತ್ವ ವಹಿಸಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ (Hyderabad) ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದರು.
Advertisement
ಅಬ್ದುಲ್ ಸಮದ್ ಸಿದ್ದೀಖಿ ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ನ್ಯೂ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾರಣೀಭೂತರಾಗಿದ್ದರು. ಅಲ್ಲದೇ ರಾಯಚೂರಿನಲ್ಲಿ ಸಫೀಯಾ ಸಂಸ್ಥೆ ಮೂಲಕ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದ್ದರು.
Advertisement
Advertisement
ಜನತಾದಳದಿಂದ 1988 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 1994 ರ ವರೆಗೆ ಕಾರ್ಯನಿರ್ವಹಿಸಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರು ಮತ್ತು ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇಂದು ರಾಯಚೂರು ನಗರದ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಸಿದ್ದೀಖಿ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ವರಕವಿ ದ.ರಾ.ಬೇಂದ್ರೆ ಸೊಸೆ ನಿಧನ