ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ (Ashok Gehlot) ಕೋವಿಡ್-19 ಹಾಗೂ ಹಂದಿ ಜ್ವರ ಪಾಸಿಟಿವ್ ಕಾಣಿಸಿಕೊಂಡಿದೆ.
ಈ ಕರಿತು ಅಶೋಕ್ ಗೆಹ್ಲೋಟ್ ಅವರೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಘುರಾಮ್ ರಾಜನ್ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ- ಮಹಾರಾಷ್ಟ್ರದಿಂದ ಆಯ್ಕೆ?
Advertisement
पिछले कुछ दिनों से बुखार होने के कारण आज डॉक्टर्स की सलाह पर जांच करवाईं जिसमें कोविड और स्वाइन फ्लू की पुष्टि हुई है। इस कारण अगले सात दिन तक मुलाकात नहीं कर सकूंगा।
इस बदलते मौसम में आप सब भी अपने स्वास्थ्य का ध्यान रखें।
— Ashok Gehlot (@ashokgehlot51) February 2, 2024
Advertisement
ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ನಾನು ಪರೀಕ್ಷೆಗೆ ಒಳಗಾಗಿದ್ದು ಕೋವಿಡ್-19 ಹಾಗೂ ಹಂದಿಜ್ವರ ಪಾಸಿಟಿವ್ (Covid 19 And Swine Flu) ಎಂದು ದೃಢಪಟ್ಟಿದೆ. ಇದರಿಂದಾಗಿ ಮುಂದಿನ ಏಳು ದಿನಗಳವರೆಗೆ ನಾನು ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಬದಲಾದ ಕಾಲಮಾನದಲ್ಲಿ ಪಕ್ಷದ ಮುಖಂಡರೂ ತಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷದ ಮುಖಂಡರು ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.
Advertisement
ಮುಂದಿನ ಚಿಕಿತ್ಸೆಗಾಗಿ ಅಶೋಕ್ ಗೆಹ್ಲೋಟ್ ಅವರನ್ನು ಜೈಪುರದ SMS ಆಸ್ಪತ್ರೆಯ ಐಡಿಎಚ್ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್ ನೋಟಿಸ್
Advertisement
ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಸಕ್ರೀಯವಾಗಿ ಪ್ರಚಾರದಲ್ಲಿ ತೊಡಗಿದ್ದ ಅಶೋಕ್ ಗೆಹ್ಲೋಟ್ ಚುನಾವಣೆ ಫಲಿತಾಂಶದ ಬಳಿಕ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನೂ ಕಡಿಮೆ ಮಾಡಿದ್ದರು. ಕಳೆದ ಒಂದು ವಾರದಿಂದ ಅವರಿಗೆ ಜ್ವರ ಕಾಣಿಸಿಕೊಂಡಿದ್ದ ಕಾರಣ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಇದನ್ನೂ ಓದಿ: ಲೋಕಸಭೆಯಲ್ಲಿ ಕಾಂಗ್ರೆಸ್ 40 ಸೀಟು ಗೆಲ್ಲೋದು ಡೌಟ್ – ಬಿಜೆಪಿ ಪರ ದೀದಿ ಬ್ಯಾಟಿಂಗ್