ಚಂಡೀಗಢ: ಪಂಜಾಬ್ ವಿಧಾನಸಭಾ ಮಾಜಿ ಸ್ಪೀಕರ್ ಮತ್ತು ಶಿರೋಮಣಿ ಅಕಾಲಿದಳದ ನಾಯಕ ನಿರ್ಮಲ್ ಸಿಂಗ್ ಕಹ್ಲೋನ್(79) ಅವರು ಇಂದು ನಿಧನರಾಗಿದ್ದಾರೆ.
ಭಾನುವಾರ ಗುರುದಾಸ್‍ಪುರ ಜಿಲ್ಲೆಯ ಫತೇಘರ್ ಚುರಿಯನ್ ಬಳಿಯ ದಾದುಜೋಧ್ ಗ್ರಾಮದಲ್ಲಿ ಕಹ್ಲೋನ್‍ನ ಅಂತಿಮ ವಿಧಿಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಪುರುಷನೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್
ನಿರ್ಮಲ್ ಸಿಂಗ್ ಕಹ್ಲೋನ್ ನಿಧನಕ್ಕೆ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ಅಕಾಲಿದಳದ ನಾಯಕ ಮತ್ತು ಮಾಜಿ ಪಂಜಾಬ್ ವಿಧಾನಸಭಾ ಸ್ಪೀಕರ್ ಎಸ್.ನಿರ್ಮಲ್ ಸಿಂಗ್ ಕಹ್ಲೋನ್ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಕಹ್ಲೋನ್ ಅವರು ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ಅವರು ನೀಡುತ್ತಿದ್ದ ಸಲಹೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ದುಃಖಕರವಾದ ಸಮಯದಲ್ಲಿ ನಾನು ಕಹ್ಲೋನ್ ಕುಟುಂಬದೊಂದಿಗಿರುತ್ತೇನೆ ಎಂದು ಬಾದಲ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ ಪಂಜಾಬ್‍ನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು, ಅಕಾಲಿದಳದ ನಾಯಕ ಮತ್ತು ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ಅವರ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಆದೇಶದಲ್ಲಿ ವ್ಯಾಕರಣ ದೋಷ- ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ
ನಿರ್ಮಲ್ ಸಿಂಗ್ ಕಹ್ಲೋನ್ ಅವರು 1997 ರಿಂದ 2002ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ಗಳ ರಾಜ್ಯ ಸಚಿವರಾಗಿ ಮತ್ತು 2007 ರಿಂದ 2012ರವರೆಗೆ ಪಂಜಾಬ್ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.