ಚಿತ್ರದುರ್ಗ: ಕಾಮಗಾರಿ ಹಣ ದುರ್ಬಳಕೆ ಆರೋಪದಡಿ ಚಿತ್ರದುರ್ಗ (Chitradurga) ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ (Former Project Director) ಮೂಡಲಗಿರಿಯಪ್ಪನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದಲ್ಲಿ ಹಲವು ವರ್ಷಗಳಿಂದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕನಾಗಿದ್ದ ಮೂಡಲಗಿರಿಯಪ್ಪ ವಿವಿಧ ಕಾಮಗಾರಿಗಳ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಅಧಿಕಾರದ ಅವಧಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ 7 ಕೋಟಿ ರೂ.ಗೂ ಅಧಿಕ ಹಣವನ್ನು ಲಪಟಾಯಿಸಿದ ಆರೋಪ ಹಾಗೂ ಬೇನಾಮಿ ವ್ಯಕ್ತಿಗಳ ಹೆಸರಲ್ಲಿ ಚೆಕ್ ನೀಡಿ ಹಣ ನುಂಗಿರುವ ಆರೋಪದಡಿ ಮೂಡಲಗಿರಿಯಪ್ಪನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮತ್ತೆ ಸೊಂಟಕ್ಕೆ ಪೆಟ್ಟು- ವೃಕ್ಷ ಮಾತೆ ಆಸ್ಪತ್ರೆಗೆ ದಾಖಲು
Advertisement
Advertisement
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸತ್ಯನಾರಾಯಣ ರಾವ್ ಎಂಬವರು ಈ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸೋಮವಾರ ಮೂಡಲಗಿರಿಯಪ್ಪನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಟ್ ಆ್ಯಂಡ್ ರನ್ ಕೇಸ್‌ಗೆ ತಂದೆ, ಮಗ ಬಲಿ – ಮತ್ತೋರ್ವನ ಸ್ಥಿತಿ ಗಂಭೀರ
Advertisement
Advertisement
ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಿರ್ಮಿತಿ ಕೇಂದ್ರದ ಹಣ ಲಪಟಾಯಿಸಿದ ಕೇಸಲ್ಲಿ ಡಿಸ್‌ಮಿಸ್ ಆಗಿರುವ ಮೂಡಲಗಿರಿಯಪ್ಪನ ವಿರುದ್ಧ ಭಾನುವಾರ ಮತ್ತೊಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ಸಿಇಎನ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ಮೂಡಲಗಿರಿಯಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಹಾಗೂ ಸರ್ಕಾರಿ ಕಟ್ಟಡ ಕಾಮಗಾರಿಗಳಲ್ಲಿ ಗೋಲ್‌ಮಾಲ್ ಆರೋಪಗಳು ಸಹ ಇವೆ. ಈ ಹಿಂದೆ 2023ರ ಚುನಾವಣೆಗೆ ಹಿರಿಯೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೂಡಲಗಿರಿಯಪ್ಪ ಉತ್ಸಾಹದಲ್ಲಿದ್ದರು. ಆದರೆ ಟಿಕೆಟ್ ಸಿಗದ ಪರಿಣಾಮ ಕಣದಿಂದ ಹಿಂದೆ ಸರಿದಿದ್ದರು. ಇದನ್ನೂ ಓದಿ: ವಿರೋಧದ ನಡುವೆ ಅಂತರ್ಜಾತಿ ವಿವಾಹ- ಠಾಣೆ ಮೆಟ್ಟಿಲೇರಿದ ಜೋಡಿ
Web Stories