ಹೈದರಾಬಾದ್: ರಾಜ್ಯದಲ್ಲಿ ಆರಂಭವಾದ ಹಿಜಾಬ್-ಕೇಸರಿ ಶಾಲು ಗಲಭೆ ಈಗ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ತರಗತಿಗಳಲ್ಲಿ ಹಿಜಬ್ ಬ್ಯಾನ್ ಮಾಡಿದ್ದನ್ನು ವಿರೋಧಿಸಿ ದೇಶದ್ಯಾಂತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ.
Advertisement
ಒಂದು ಕಡೆ ಜನ ಸಾಮಾನ್ಯರು ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಈಗ ಮಾಜಿ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯ ಸರ್ಕಾರ ಅದರಲ್ಲೂ ವಿಶೇಷವಾಗಿ ಬಿಜೆಪಿ ಟಾರ್ಗೆಟ್ ಮಾಡಿರುವ ಕೆಸಿಆರ್ ಕೋಮುವಾದ ರಾಜಕೀಯ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ – ಅಪ್ರಾಪ್ತ ಬಾಲಕಿಯರ ವೈಯಕ್ತಿಕ ವಿವರ ಟ್ವೀಟ್ ಮಾಡ್ತಿದೆ ಬಿಜೆಪಿ: ಶಿವಸೇನಾ ಸಂಸದೆ ತರಾಟೆ
Advertisement
Advertisement
ಚಂದ್ರಶೇಖರ್ ರಾವ್ ಆರಂಭಿಸಿರುವ ಈ ಹೋರಾಟಕ್ಕೆ ಈಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಕೆಸಿಆರ್ ಜೊತೆಗೆ ದೂರವಾಣಿ ಮೂಲಕ ಮಾತಮಾಡಿದ ಹೆಚ್‍ಡಿಡಿ, ರಾವ್ ಸಾಬ್ ಉತ್ತಮವಾಗಿ ಹೋರಾಟ ಮಾಡ್ತಿದ್ದೀರಿ, ನಿಮ್ಮಂತೆ ಎಲ್ಲರೂ ಕೂಡ ಕೋಮುಗಲಭೆ ವಿರುದ್ಧ ಹೋರಾಟ ನಡೆಸಬೇಕು. ನಮ್ಮ ದೇಶದ ಜಾತ್ಯತೀತತೆ, ಸಂಸ್ಕೃತಿ ಮತ್ತು ವೈವಿಧ್ಯಮಯ ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ ಸಿದ್ಧ: ರಾಜವಂಶಸ್ಥ ಯದುವೀರ್ ಒಡೆಯರ್
Advertisement
ಸದ್ಯ ನೀವೂ ಆರಂಭಿಸಿರುವ ಹೋರಾಟಕ್ಕೆ ನಾವು ನೈತಿಕ ಬೆಂಬಲ ನೀಡುತ್ತಿದ್ದು, ಹೋರಾಟವನ್ನು ಮುಂದುವರಿಸಿ ಎಂದು ಹೇಳಿದ್ದಾರೆ. ಇದಕ್ಕೆ ಹರ್ಷ ವ್ಯಕ್ತಪಡಿಸಿದ ಕೆಸಿಆರ್, ಬೆಂಗಳೂರಿಗೆ ಬಂದಾಗ ಖುದ್ದು ಭೇಟಿ ಮಾಡುವುದಾಗಿ ಹೇಳಿದ್ದಾರೆ.