ಬೆಂಗಳೂರು: ಚುನಾವಣೆಯಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ದೇವೇಗೌಡ್ರು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ದೇವೇಗೌಡ್ರು, ಇವಿಎಂನ ಬಳಕೆ ಬಗ್ಗೆ ಸಾಕಷ್ಟು ಅನುಮಾನವಿದ್ದು, ಇದು ಬೇಡ ಅನ್ನೋದು ನಮ್ಮ ಪಕ್ಷದ ವಾದ. 2008ರಲ್ಲಿಯೇ ನಮ್ಮ ಪಕ್ಷದಿಂದ ಚುನಾವಣೆ ಆಯೋಗಕ್ಕೆ ಇವಿಎಂ ಬಳಕೆ ಬಗ್ಗೆ ದೂರು ನೀಡಿದ್ದೇವೆ ಅಂತಾ ಅಂದ್ರು.
Advertisement
Advertisement
ಅನಂತಕುಮಾರ್ ವಿರುದ್ಧ ಗರಂ: ಟಿಕೆಟ್ ವಿಚಾರದಲ್ಲಿ ದೇವೇಗೌಡರ ಕುಟುಂಬದಲ್ಲಿ ಗೊಂದಲ ಇದೆ ಎಂದಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದ್ರು. ಗೊಂದಲ ನಿವಾರಣೆ ಮಾಡಿ ಅಂತ ನಾವೇನು ಅನಂತ್ ಕುಮಾರ್ ಅವ್ರನ್ನ ಕೇಳಿದ್ವಾ? ಪಂಚಾಯ್ತಿ ಮಾಡಿ ಅಂತ ಅವರ ಮನೆಯ ಬಾಗಿಲಿಗೆ ಹೋಗಿಲ್ಲ. ನಮ್ಮ ಕುಟುಂಬದ ವಿಚಾರ ಅವರಿಗ್ಯಾಕೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಈ ಹಿಂದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ನಮ್ಮ ಮನೆ ಬಾಗಿಲಿಗೆ ಬಂದಿದ್ರು. ಪಕ್ಷ ಬಿಟ್ಟು ಬರ್ತೀವಿ ಒಂದು ಮಂತ್ರಿ ಸ್ಥಾನಕೊಡಿ ಅಂತ ಅಂತ ಅನಂತ್ ಕುಮಾರ್ ಗೆ ಟಾಂಗ್ ಕೊಟ್ಟರು.
Advertisement
ಬಂಡಾಯ ಜೆಡಿಎಸ್ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳದ ಸ್ಪೀಕರ್ ಕೋಳಿವಾಡ್ ಅವರ ಮೇಲೆ ಮಾಜಿ ಪಿಎಂ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬಂಡಾಯ ಶಾಸಕರ ವಿರುದ್ದ ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ. ಒಂದು ವರ್ಷ ಕಳೆದರು ಇನ್ನು ಸ್ಪೀಕರ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದು ವರ್ಷ ಬೇಕಾ ಕ್ರಮ ತೆಗೆದುಕೊಳ್ಳಲು ಅಂತ ಪ್ರಶ್ನೆ ಮಾಡಿದ್ರು. ನೋಡೋಣ ಸ್ಪೀಕರ್ ಏನ್ ಕ್ರಮ ತೆಗೆದುಕೊಳ್ತಾರೆ ಅಂತ ಅಸಮಾಧಾನ ಹೊರ ಹಾಕಿದ್ರು.
Advertisement