ಮಂಡ್ಯ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮೈಸೂರಿನಿಂದ ಸ್ಪರ್ಧೆ ಮಾಡಬೇಕು. ಮೈಸೂರಿನಲ್ಲಿ ದೇವೇಗೌಡರೇ ನಿಲ್ಲಬೇಕೆಂದು ಪಕ್ಷದ ಕಾರ್ಯಕರ್ತರೆಲ್ಲ ಮನವಿ ಮಾಡಿಕೊಂಡಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಹೇಳಿದ್ದಾರೆ.
ಹಾಸನದಲ್ಲಿ ಪ್ರಜ್ವಲ್ ಮತ್ತು ಮಂಡ್ಯದಲ್ಲಿ ನಿಖಿಲ್ ಎಂದು ಪಕ್ಷದ ವರಿಷ್ಠರು ಘೋಷಣೆ ಮಾಡಿದ್ದಾರೆ. ಹಾಗಾಗಿ ದೇವೇಗೌಡರು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ ಎಂದು ನಾವೆಲ್ಲ ಕೇಳಿಕೊಂಡಿದ್ದೇವೆ. ದೇವೇಗೌಡರಿಗೆ ಮೈಸೂರು ಹಾಗೂ ಇಲ್ಲಿಯ ಜನರ ಬಗೆ ಪ್ರೀತಿ ಇದೆ. ಇಲ್ಲಿಯ ಜನರು ಸಹ ದೇವೇಗೌಡರ ಮೇಲೆ ಪ್ರೀತಿ ಮತ್ತು ನಂಬಿಕೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರೇ ನಮಗೆ ಸೂಕ್ತ ಅಭ್ಯರ್ಥಿ ಎಂಬುವುದು ನಮ್ಮ ಅಭಿಪ್ರಾಯ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದ್ರೆ ದೇವೇಗೌಡರೇ ನಮ್ಮ ಅಭ್ಯರ್ಥಿ ಆಗಬೇಕು ಎಂಬುವುದು ನಮ್ಮ ಇಚ್ಛೆ ಎಂದು ಜಿ.ಟಿ.ದೇವೇಗೌಡರು ಹೇಳಿದ್ದಾರೆ.
Advertisement
Advertisement
ಮೈಸೂರು ಕ್ಷೇತ್ರದಲ್ಲಿ ಆಕಾಂಕ್ಷಿಗಳು ಯಾರು ಇಲ್ಲ. ದೇವೇಗೌಡರು ಮೊದಲೇ ನನ್ನ ಪುತ್ರ ಹರೀಶ್ ಗೌಡರನ್ನು ಚುನಾವಣೆಗೆ ನಿಲ್ಲಿಸು ಎಂದು ಹೇಳಿದ್ದರು. ವಿಧಾನಸಭಾ ಚುನಾವಣೆಯಲ್ಲಿಯೇ ಕಷ್ಟಪಟ್ಟು ಗೆದ್ದಿದ್ದೇವೆ. ಪುತ್ರ ಇನ್ನು ಚೇತರಿಸಿಕೊಳ್ಳುತ್ತಿದ್ದು, ಲೋಕಸಭೆಗೆ ಆತ ನಿಲ್ಲಲ್ಲ ಎಂದು ದೇವೇಗೌಡರಿಗೆ ಸ್ಪಷ್ಟಪಡಿಸಿದ್ದೇನೆ. ಹಾಗಾಗಿ ಹರೀಶ್ ಗೌಡರ ಹೆಸರು ಇಲ್ಲಿ ಬೇಡ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv