ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ತಮ್ಮ ಪಿಂಚಣಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.
ದೇವೇಗೌಡರು ಪಿಎಂ ಕೇರ್ಸ್ ಫಂಡ್, ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಕೇರಳ ಸಿಎಂ ಪರಿಹಾರ ನಿಧಿಗೆ ತಲಾ ಒಂದೊಂದು ಲಕ್ಷ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
Advertisement
“ಕೊರೊನಾ ನಿಯಂತ್ರಣ ನಿಧಿಗೆ ನಾನು ಪಡೆಯುವ ಪಿಂಚಣಿ ಹಣವನ್ನು ನೀಡುತ್ತಿದ್ದೇವೆ. ಪಿಎಂ ಕೇರ್ಸ್ ಫಂಡ್, ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 1 ಲಕ್ಷ ನೀಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
Advertisement
Out of the pension he receives, Former Prime Minster @H_D_Devegowda has contributed Rs. 1,00,000/- each to PM Cares Fund, Govt. of Karnataka Chief Minister's Relief Fund, and Kerala Chief Minister's Distress Relief Fund.
– Office of HDD@PMOIndia@CMofKarnataka@CMOKerala
— H D Devegowda (@H_D_Devegowda) April 11, 2020
Advertisement
ಈ ಮೂಲಕ ಕೊರೊನಾ ಪರಿಹಾರ ನಿಧಿಗೆ ದೇವೇಗೌಡರು ಮೂರು ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಮಹಾಮಾರಿ ಕೊರೊನಾ ವೈರಸ್‍ಗೆ ಇಡೀ ದೇಶವೇ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ಹೀಗಾಗಿ ಪಿಎಂ, ಸಿಎಂ ಕೊರೊನಾ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಅನೇಕರು ಕೊರೊನಾ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.