ರೋಮ್: ಇಟಲಿಯ ಮಾಜಿ ಪ್ರಧಾನಿ (Former Italian Prime Minister) ಸಿಲ್ವಿಯೊ ಬೆರ್ಲುಸ್ಕೋನಿ (Silvio Berlusconi) ಅವರು ಕಳೆದ ತಿಂಗಳು ನಿಧನರಾಗಿದ್ದಾರೆ. ಅವರು ಸಾವನ್ನಪ್ಪುವುದಕ್ಕೂ ಮುನ್ನ ತನ್ನ 33 ವರ್ಷದ ಗೆಳತಿಯ (Girlfriend) ಹೆಸರಿನಲ್ಲಿ ಬರೋಬ್ಬರಿ 900 ಕೋಟಿ ರೂ. ಮೌಲ್ಯದ ಆಸ್ತಿ ಬರೆದಿರುವುದಾಗಿ ವರದಿಯಾಗಿದೆ.
86 ವರ್ಷದ ಬೆರ್ಲುಸ್ಕೋನಿ ಅವರು 33 ವರ್ಷದ ಮಾರ್ಟಾ ಫಾಸಿನಾ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಮದುವೆಯಾಗಿರಲಿಲ್ಲ. ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಜೂನ್ 12 ರಂದು ನಿಧನರಾಗಿದ್ದಾರೆ. ಅವರ ಕೊನೆ ದಿನಗಳಲ್ಲಿ ತಮ್ಮ ಗೆಳತಿಯನ್ನು ಪತ್ನಿ ಎಂದು ಉಲ್ಲೇಖಿಸಿ ತಮ್ಮ ಸುಮಾರು 905 ಕೋಟಿ ರೂ. ಮೌಲ್ಯದ ಆಸ್ತಿಯನ್ನು (100 ದಶಲಕ್ಷ ಯುರೋ) ಬರೆದಿದ್ದಾರೆ.
ಸಿಲ್ವಿಯೊ ಬರ್ಲುಸ್ಕೋನಿ ಹಾಗೂ ಮಾರ್ಟಾ ಫಾಸಿನಾ ನಡುವೆ 2020ರಲ್ಲಿ ಪ್ರೇಮಾಂಕುರವಾಗಿತ್ತು. ಈ ಹಿಂದೆ ಇಬ್ಬರನ್ನು ಮದುವೆಯಾಗಿದ್ದ ಇಟಲಿಯ ಮಾಜಿ ಪ್ರಧಾನಿ ಇಬ್ಬರಿಗೂ ವಿಚ್ಛೇದನ ನೀಡಿ ಬಳಿಕ ಮಾರ್ಟಾ ಫಾಸಿನಾ ಜೊತೆ ಸಂಬಂಧ ಬೆಳೆಸಿದ್ದರು. ಇದನ್ನೂ ಓದಿ: ಅನಾರೋಗ್ಯ ಪೀಡಿತ ತಂದೆ ನೋಡಲು ಹೋಗಿ ಅನಾರೋಗ್ಯಕ್ಕೀಡಾದ ಮದನಿ
ವರದಿಗಳ ಪ್ರಕಾರ ಬರ್ಲುಸ್ಕೋನಿ ಅವರ ಸಂಪತ್ತನ್ನು 5 ಶತಕೋಟಿ ಯೂರೋಗಳೆಂದು ಅಂದಾಜಿಸಲಾಗಿದೆ. ಅವರು ದೊಡ್ಡ ಉದ್ಯಮಿಯೂ ಆಗಿದ್ದರಿಂದ ತಮ್ಮ ಗೆಳತಿಯ ಹೆಸರಿನಲ್ಲಿ ದೊಡ್ಡ ಮೊತ್ತದ ಆಸ್ತಿಯನ್ನು ಬರೆದಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೇ ಬರ್ಲುಸ್ಕೋನಿ ಅವರು ತಮ್ಮ ಕುಟುಂಬಸ್ಥರ ಹೆಸರಿನಲ್ಲೂ ಆಸ್ತಿಯನ್ನು ಬರೆದಿದ್ದಾರೆ. ತಮ್ಮ ಸಹೋದರ ಪಾವೋಲೊ ಅವರಿಗೆ 100 ದಶಲಕ್ಷ ಯೂರೋ, ಇಬ್ಬರು ಮಕ್ಕಳಿಗೆ ಕಂಪನಿಯಲ್ಲಿ 53% ರಷ್ಟು ಶೇರುಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಶೋನಲ್ಲೇ ‘ಧಮ್’ ಹೊಡೆದ ಸಲ್ಮಾನ್ ಖಾನ್
Web Stories