ರಾಮನಗರ: ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವನ್ನು ಬಯಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಹಾಗೂ ಸೊಸೆ ಅನಿತಾ ಕುಮಾರಸ್ವಾಮಿ ಪರ ಹಳ್ಳಿಮಾಳ ಗ್ರಾಮದಲ್ಲಿ ದೇವೇಗೌಡರು ಬಹಿರಂಗ ಪ್ರಚಾರ ನಡೆಸಿದ್ದರು. ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ 38 ಸ್ಥಾನ ಮಾತ್ರ ಬಂದಿದ್ದರೂ ಸರ್ಕಾರ ಮಾಡಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್‍ನವರು ಕೇಳಿದ್ದರು. ಎಚ್‍ಡಿಕೆ ಸಿಎಂ ಆಗೋದು ಅನಿವಾರ್ಯ ಆಗಿರಲಿಲ್ಲ. ಆದರೆ ದೇಶದ ಹಲವು ಪಕ್ಷಗಳು ಒಗ್ಗಟು ಪ್ರದರ್ಶನಕ್ಕಾಗಿ ನಾನು ಅನುಮತಿ ಕೊಟ್ಟೆ ಎಂದರು.
Advertisement
Advertisement
ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿದ್ದರೂ, ಕಾಂಗ್ರೆಸ್ ಗೆಲ್ಲಲ್ಲು ಅಭ್ಯರ್ಥಿ ಹಾಕದಂತೆ ಎಚ್‍ಡಿಕೆಗೆ ಈ ಹಿಂದೆಯೇ ತಿಳಿಸಿದ್ದೆ. ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವನ್ನು ಬಯಸುತ್ತೇನೆ. ಮಾಡಬೇಕಾದ ಕೆಲಸ ತುಂಬಾ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಆಗಿದೆ. ನಾವು ಅಧಿಕಾರಕ್ಕೆ ಬಂದಿದ್ದು ದೇವರ ಇಚ್ಛೆ. ನಮ್ಮ ನಡುವಿನ ವೈರತ್ವವನ್ನು ಮರೆಯೋದು ಹೇಗೆ ಎಂದು ಎಲ್ಲರೂ ಅಂದುಕೊಳ್ಳಬಹುದು, ಆದರೆ ನಾವು ಮರೆಯಬೇಕಿರುವುದು ನಮ್ಮ ಹಗೆತನವನ್ನು ಹಾಗೂ ಹೋರಾಟವನ್ನ, ಈ ಮೊದಲು ಹಳ್ಳಿಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದರು. ಆದರೆ ಈಗ ಎಲ್ಲವನ್ನೂ ಮರೆಯಬೇಕು. ಅದನ್ನು ಬಿಟ್ಟರೇ, ಬೇರೆ ದಾರಿಯಿಲ್ಲ. ನಾನು ಉದ್ವೇಗದ ಭಾಷಣ, ವ್ಯಕ್ತಿ ನಿಂದನೆ ಮಾಡಲು ಬಂದಿಲ್ಲ. ಕೇವಲ ದೋಸ್ತಿ ಸರ್ಕಾರದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿದ್ರು.
Advertisement
Advertisement
ಅನಿತಾ ಕುಮಾರಸ್ವಾಮಿ ಮತ ಕೇಳಲು ಬಂದಾಗ ಕೆಲವು ಗ್ರಾಮಗಳಲ್ಲಿ ವಿರೋಧ ವ್ಯಕ್ತ ಆಗಿದ್ದನ್ನು, ನಾನು ಸಹ ಗಮನಿಸಿದ್ದೇನೆ. ಅದು ಸಹಜ, ಎರಡೂ ಕ್ಷೇತ್ರಗಳ ಬೆಳವಣಿಗೆಗೆ ಶ್ರಮಿಸೋಣ. ರಾಮನಗರ ಮತ್ತು ಚನ್ನಪಟ್ಟಣ ಎರಡೂ ಸಿಎಂ ಕುಮಾರಸ್ವಾಮಿ ಕಣ್ಣುಗಳಂತೆ. ಎರಡೂ ಕ್ಷೇತ್ರಗಳು ಬೆಳೆಯಬೇಕು. ಅಲ್ಲದೇ ಗ್ರಾಮಸ್ಥರು ಆರೋಪವನ್ನು ನಾನು ಸ್ವಾಗತಿಸುತ್ತೇನೆ. ರೇಷ್ಮೆ ಸೇರಿದಂತೆ ಕೆಲವು ಬೆಳೆಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಏರುಪೇರಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳುತ್ತದೆ. ಸಿಎಂ ಎಚ್‍ಡಿಕೆ ಯಾವುದೇ ಕಾರಣಕ್ಕೂ, ತಮ್ಮ ಕ್ಷೇತ್ರಗಳನ್ನು ಕೈ ಬಿಡುವುದಿಲ್ಲ. ಯಾರು ಏನೇ ಆರೋಪ ಮಾಡಿದರೂ, ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದ್ರು.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿಯನ್ನು ಸಿಎಂ ಕುಮಾರಸ್ವಾಮಿಯವರ ಮೇಲಿದೆ. ಅವರೂ ಸಹ ತಮ್ಮ ಜವಾಬ್ದಾರಿಯನ್ನು ಎಲ್ಲಾ ನಾಯಕರ ಹೆಗಲಿಗೆ ಹಾಕಿದ್ದಾರೆ. ಕೋಮುವಾದಿ ಪಕ್ಷ ಅಧಿಕಾರದಲ್ಲಿ ಇರಬಾರದು. ಈ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ನೀವು ಬೆಂಬಲ ನೀಡಬೇಕು. ಬಿಜೆಪಿಯವರು ತಮ್ಮ 225 ಸ್ಥಾನಗಳಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ಕೊಟ್ಟಿಲ್ಲ. ಅವರ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದು. ಹಾಗಾದರೆ ಮುಸ್ಲಿಂ ಬಾಂಧವರು ಎಲ್ಲಿ ಹೋಗಬೇಕು. ಹಿಂದೂ-ಮುಸ್ಲಿಂ ಒಗ್ಗಟ್ಟಾಗಿ ಇರಬೇಕು. ಹೀಗಾಗಿ ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲಾ ಒಂದಾಗಿದ್ದೇವೆ.
ಬಿಬಿಎಂಪಿ ಚುನಾವಣೆಯಲ್ಲಿ ನಾವು ಗೆದ್ದಿದ್ದು 14 ಸ್ಥಾನ ಮಾತ್ರ. ಆಗ ಮೇಯರ್ ಸ್ಥಾನವನ್ನು ನಿಮಗೆ ಕೊಡುತ್ತೀವಿ ಎಂದು ಬಿಜೆಪಿಯವರು ಬಂದಿದ್ದರು. ಬಿಜೆಪಿಯವರ ಪ್ರಸ್ತಾಪವನ್ನು ನಾನು ಒಪ್ಪಲಿಲ್ಲ. ನನಗೂ ಬದ್ಧತೆ ಇದೆ. ಇದೇ ತಿಂಗಳ 31 ಇಲ್ಲ, ನವೆಂಬರ್ 1 ರಂದು ದೊಡ್ಡ ಮಟ್ಟದ ಬಹಿರಂಗ ಸಭೆ ಮಾಡುವ ಆಸೆಯು ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv