– ದೇಶದಲ್ಲಿ ಮೋದಿ ಅವರಂತಹ ನಾಯಕ ಮತ್ತೊಬ್ಬರಿಲ್ಲ
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರ ಗರ್ವಭಂಗ ಆಗಬೇಕು. ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಸೋಲಿಸಿ ಎಂದು ಮೈತ್ರಿ ನಾಯಕರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸೂಚನೆ ನೀಡಿದರು.
Advertisement
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು-ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ನಿಮಗೆ ಇದೆ ಜಿ.ಟಿ.ದೇವೇಗೌಡರೇ. ಸಿದ್ದರಾಮಯ್ಯನವರ ಗರ್ವಭಂಗ ಆಗಬೇಕು. ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ವೇದಿಕೆಯಲ್ಲೇ ಜಿ.ಟಿ.ದೇವೇಗೌಡರಿಗೆ ಕರೆ ಕೊಟ್ಟರು. ಅದಕ್ಕೆ ಜಿಟಿಡಿ, ಆಯ್ತು ಅಲ್ಲಿಂದಲೇ ಗೆಲುವು ಶುರು ಮಾಡೋಣ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕೋಲಾರದಲ್ಲಿ ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ: ಸಚಿವ ಮುನಿಯಪ್ಪ
Advertisement
Advertisement
ಕೋರ್ಟ್ಗೆ ಕೇಂದ್ರದ ವಿರುದ್ಧ ಅರ್ಜಿ ಹಾಕಿದ್ದಾರೆ ಸ್ಟ್ರಾಂಗೆಸ್ಟ್ ಸಿಎಂ. ಇಂಥ ಮಹಾನುಭಾವ ಸಿಎಂ ನಮ್ಮ ರಾಜ್ಯದಲ್ಲಿ ಇದ್ದಾರೆ, ನಮೋ ನಮಃ. ಜೆಡಿಎಸ್ ಎಲ್ಲಿದೆ ಅಂತ ಸಿದ್ದರಾಮಯ್ಯ ಕೇಳ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ. ಜೆಡಿಎಸ್ ಇದೆ. ಎಲ್ಲಿದೆ ಅಂತ ತೋರಿಸುವ ಸಾಮರ್ಥ್ಯ 91 ವರ್ಷದ ಈ ದೇವೇಗೌಡಗೆ ಇದೆ. ನಾನು ಯಾರಿಗೂ ಅಂಜಲ್ಲ, ಯಾರ ಭಯವೂ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
Advertisement
ಪರಸ್ಪರ ಸಹಕಾರ, ಒಗ್ಗಟ್ಟಿಗೆ ಯಡಿಯೂರಪ್ಪ ಪಾತ್ರ ಮುಖ್ಯವಾಗಿದೆ. ಹಿಂದೆ ಆಗಿದ್ದೆಲ್ಲ ಮರೆತುಬಿಡಿ, ಕಾಲ ಕ್ಷಣಿಕ. ನಮ್ಮ ವಿರೋಧಿಗಳು ಪ್ರಬಲರಾಗಿದ್ದಾರೆ. ಕಾಂಗ್ರೆಸ್‌ನ ಸೋಲಿಸೋದು ಅಷ್ಟು ಸುಲಭ ಅಲ್ಲ. ಹಿಂದೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ಮೋದಿಯವರ ಜತೆ ಕೈಜೋಡಿಸಲು ಹಲವು ಕಾರಣಗಳಿವೆ. ಅರವತ್ತು ವರ್ಷ ಸಾರ್ವಜನಿಕ ಜೀವನದಲ್ಲಿ ಹೋರಾಟ ಮಾಡಿದ್ದೇನೆ. ನನಗೆ ಎಲ್ಲದರ ಅರಿವು ಇದೆ. ಮೋದಿ ಹೆಸರು ಮಾತ್ರವೇ ಈ ಚುನಾವಣೆಯಲ್ಲಿ ಟ್ರಂಪ್ ಕಾರ್ಡ್ ಆಗಿದೆ. ಚುನಾವಣೆಯಲ್ಲಿ ಮೋದಿಯವರ ಹೆಸರಿನ ಬಲ ಮುಖ್ಯವಾಗಲಿದೆ. ನಮ್ಮ ಕಾರ್ಯಕರ್ತರು ಹಳೆಯ ಘಟನೆಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಿ. ದೇಶದಲ್ಲಿ ಮೋದಿಯವರಂಥ ನಾಯಕ ಮತ್ತೊಬ್ಬರು ಇಲ್ಲ ಎಂದು ಬಣ್ಣಿಸಿದರು. ಇದನ್ನೂ ಓದಿ: ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಫೈನಲ್ – ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?
ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ಸಮಯ ಕಡಿಮೆ ಇದೆ, ಕೆಲಸ ಮಾಡಿ ಎಲ್ಲ ಕ್ಷೇತ್ರ ಗೆಲ್ಲಿಸಿ. ಕಳೆದ ಅರವತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೂಮಿ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ? ಕಾಂಗ್ರೆಸ್ ಬಳಿ ಸಂಪನ್ಮೂಲ ಹೆಚ್ಚಾಗಿದೆ. ಅವರು ಎಷ್ಟು ಹಣ ಚುನಾವಣೆಯಲ್ಲಿ ಸುರೀತಿದ್ದಾರೆ? ಅವರು ಸಂಪನ್ಮೂಲ ಸಂಗ್ರಹ ಮಾಡಿದ್ದೇ ಅಕ್ರಮ ಮಾರ್ಗದಲ್ಲಿ. ಅವರು ಬೇರೆ ರಾಜ್ಯಗಳಿಗೂ ಹಣ ಸಾಗಿಸಿದರು. ಆದರೂ ಸೋಕಾಲ್ಡ್ ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಸೋಲ್ತು. ಅವರು ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಬಹುದು. ಹಣ ಸುರಿಯುವ ಕಾಂಗ್ರೆಸ್ ಸೋಲಿಸೋದು ಸುಲಭವಲ್ಲ. ಆದರೆ ಜನ ನಮ್ಮ ಪರ ಇದ್ದಾರೆ. ಈ ಹೊಸ ಮೈತ್ರಿಗೆ ತನ್ನದೇ ಆದ ಸಾಮರ್ಥ್ಯ ಇದೆ. ಪ್ರತೀ ಕ್ಷೇತ್ರಗಳಲ್ಲೂ ಮೈತ್ರಿಗೆ ಸ್ವಂತ ಬಲ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ನನ್ನನ್ನ ತುಮಕೂರಿನಲ್ಲಿ ಸೋಲಿಸಿದ್ದು ಕಾಂಗ್ರೆಸ್. ಯಾವ ಸಂದರ್ಭದಲ್ಲಿ ಏನಾಗಿದೆ ಅಂತಾ ಹೇಳ್ತೇನೆ ಯಡಿಯೂರಪ್ಪನವರೇ. ನನ್ನನ್ನೇ ತುಮಕೂರಿನಲ್ಲಿ ಸೋಲಿಸ್ತಾರೆ. ಯಾವ ಸಮಾಜಕ್ಕೆ ನಾನು ಏನು ಮಾಡಿದ್ದೇನೆ ಅಂತಾ ಇಲ್ಲಲ್ಲ ಬೇರೆ ಮಾತಾಡ್ತೀನಿ ಯಡಿಯೂರಪ್ಪನವರೇ. ನಾನು ಯಾವ ಕ್ಷೇತ್ರಕ್ಕಾದ್ರೂ ಹೋಗ್ತೀನಿ. ನನಗೆ ನನ್ನ ಮಂಡಿ ನೋವು ಇದ್ದರೂ ಪರವಾಗಿಲ್ಲ. ನನ್ನ ತಲೆ ಎನ್‌ಸೈಕ್ಲೋಪೀಡಿಯಾ, ಎಲ್ಲವೂ ನೆನಪಿದೆ. ಆದರೆ ಮಂಡಿಗಳೆರಡೂ ಸಹಕರಿಸಲ್ಲ ಎಂದು ತಮ್ಮ ಅನಾರೋಗ್ಯದ ಕುರಿತು ಮಾತನಾಡಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅನ್ಸಾರಿ ಸಾವು – ಸುಪ್ರೀಂ ಕೋರ್ಟ್ ತನಿಖೆಗೆ ಆಗ್ರಹಿಸಿದ ಅಖಿಲೇಶ್ ಯಾದವ್