ಬೆಂಗಳೂರು: ಸೋಮವಾರ (ಜ.22) ರಂದು ರಾಮಮಂದಿರದಲ್ಲಿ (Ram Mandir) ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ (Pran Pratishtha ಸಮಾರಂಭದಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ಕುಟುಂಬ ಸಮೇತರಾಗಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.
ಇಂದು (ಭಾನುವಾರ) ಹೆಚ್‌ಎಎಲ್‌ನಿಂದ ಪ್ರೈವೆಟ್ ಜೆಟ್‌ನಲ್ಲಿ ಅಯೋಧ್ಯೆಗೆ ಹೊರಟಿದ್ದಾರೆ. ಹೆಚ್.ಡಿ.ದೇವೇಗೌಡರ ಜೊತೆ ಪತ್ನಿ ಚೆನ್ನಮ್ಮ, ಪುತ್ರ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy), ಮೊಮ್ಮಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕೂಡ ಹೊರಟಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಲ್ಲ.. ನಾವು ಅಣ್ಣಮ್ಮ, ಮಾರಮ್ಮ, ಭೂತ ಪೂಜೆ ಮಾಡೋರು.. ಅಲ್ಲಿಗೆ ಹೋಗ್ತೀವಿ: ಬಿ.ಕೆ.ಹರಿಪ್ರಸಾದ್
Advertisement
Advertisement
ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ಎಲ್ಲರೂ ಅಯೋಧ್ಯೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
Advertisement
Advertisement
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ದೇಶದೆಲ್ಲೆಡೆ ರಾಮಭಕ್ತರಲ್ಲಿ ಸಂಭ್ರಮ-ಸಡಗರ ಮನೆ ಮಾಡಿದೆ. 500 ವರ್ಷಗಳ ನಂತರ ಶ್ರೀರಾಮ ಮತ್ತೆ ಪಟ್ಟಕ್ಕೇರಲು ಸಿದ್ಧನಾಗಿದ್ದಾನೆ. ಸೋಮವಾರ ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆ ಕಂಗೊಳಿಸುತ್ತಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗಾಗಿ ಅರ್ಧದಿನ ರಜೆ ಘೋಷಿಸಿದ್ದ AIIMS – ಒಂದು ದಿನದ ನಂತ್ರ ಆದೇಶ ವಾಪಸ್!