– ಧರ್ಮ ಗುರುಗಳ ಭೇಟಿ ಮೂಲಕ ಮುಸ್ಲಿಂ ಮತಗಳ ಸೆಳೆಯಲು ಜೆಡಿಎಸ್ ಕಸರತ್ತು
ರಾಮನಗರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ಇಂದು ಮುಸ್ಲಿಂ ಧರ್ಮಗುರುಗಳ ಮನೆಗೆ ಭೇಟಿ ನೀಡಿದರು. ಚನ್ನಪಟ್ಟಣದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವಂತೆ ಮುಸ್ಲಿಂ ಸಮುದಾಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ಚನ್ನಪಟ್ಟಣದಲ್ಲಿ (Channapatna) ಅಲ್ಪಸಂಖ್ಯಾತ ಮತಗಳ ಸೆಳೆಯಲು ಜೆಡಿಎಸ್ ತಂತ್ರಗಾರಿಕೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ದೇವೇಗೌಡರು ಇಂದು ಮುಸ್ಲಿಂ ಧರ್ಮಗುರುಗಳ ಮನೆಗೆ ಭೇಟಿ ಕೊಟ್ಟರು. ಅಖಿಲ್ ಷಾ ಖಾದ್ರಿ ದರ್ಗಾದ ಧರ್ಮಗುರು ಸಯ್ಯದ್ ಮಸನ್ನ ಷಾ ಖಾದ್ರಿ ನಿವಾಸಕ್ಕೆ ಮಾಜಿ ಪ್ರಧಾನಿಗಳು ಭೇಟಿ ನೀಡಿದರು. ಈ ವೇಳೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ರಾ ಜಮೀರ್? – ಪ್ರಚಾರದ ವೇಳೆ ಮಹಿಳೆಗೆ 500 ರೂ. ಹಣಕೊಟ್ಟ ಸಚಿವ
ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರ ಜತೆ ದೇವೇಗೌಡರು ಪ್ರಚಾರ ಸಭೆ ನಡೆಸಿದರು. ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗೆ ಸಹಕರಿಸಿ ಎಂದು ಮುಸ್ಲಿಂ ಸಮಯದಾಯದ ಬೆಂಬಲ ಕೋರಿದರು. ಮೊಮ್ಮಗ ನಿಖಿಲ್ ಗೆಲ್ಲಿಸುವಂತೆ ದೇವೇಗೌಡರರಿಂದ ಮನವಿ
ಮೊನ್ನೆಯಷ್ಟೇ ಚನ್ನಪಟ್ಟಣದಲ್ಲಿ ಹೆಚ್‌ಡಿಡಿ ಅಲ್ಪಸಂಖ್ಯಾತರ ಸಭೆ ಮಾಡಿದ್ದರು. ಕಳೆದ ಐದು ದಿನಗಳಿಂದಲೂ ಮೊಮ್ಮಗನ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಂ ಮತಗಳು 30 ಸಾವಿರಕ್ಕೂ ಹೆಚ್ಚಿವೆ. ಇದನ್ನೂ ಓದಿ: ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ: ಬೊಮ್ಮಾಯಿ