ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಅಲ್ ಅಜೀಜಿಯಾ ಸ್ಟೀಲ್‍ಮಿಲ್ಸ್ ಭ್ರಷ್ಟಾಚಾರ ಎಸಗಿದ ಪ್ರಕರಣದಲ್ಲಿ 7 ವರ್ಷ ಶಿಕ್ಷೆ ವಿಧಿಸಲಾಗಿದೆ.
ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣದಲ್ಲಿ ಈಗಾಗಲೇ 11 ವರ್ಷಗಳ ಸೆರೆಮನೆ ಶಿಕ್ಷೆಯನ್ನು ನವಾಜ್ ಷರೀಫ್ ಅನುಭವಿಸುತ್ತಿದ್ದು, ಈ ಸಂಬಂಧ ಷರೀಫ್ ಮೇಲೆ ಒಟ್ಟು 3 ಕೇಸ್‍ಗಳು ದಾಖಲಾಗಿದ್ದವು.
Advertisement
Advertisement
ಸದ್ಯ ಅಲ್ ಅಜೀಜಿಯಾ ಸ್ಟೀಲ್ ಮಿಲ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ಭ್ರಷ್ಟಚಾರ ನಿಗ್ರಹ ನ್ಯಾಯಾಲಯ 2.5 ಮಿಲಿಯನ್ ಡಾಲರ್(ಅಂದಾಜು 17.33 ಕೋಟಿ ರೂ.) ದಂಡದೊಂದಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಉಳಿದಂತೆ ಫ್ಲ್ಯಾಗ್ ಶಿಪ್ ಇನ್‍ವೆಸ್ಟ್ ಮೆಂಟ್ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.
Advertisement
2017ರ ಜುಲೈನಲ್ಲಿ ಪನಾಮ ಪೇಪರ್ಸ್ ಹಗರಣದಲ್ಲಿ ಸುಪ್ರೀಂ ಕೋರ್ಟ್ ನವಾಜ್‍ರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿತ್ತು. 2018ರ ಜುಲೈನಲ್ಲಿ ಅವೆನ್‍ಫೀಲ್ಡ್ ಭ್ರಷ್ಟಾಚಾರ ಹಗರಣದಲ್ಲಿ ನವಾಜ್, ಅವರ ಪುತ್ರಿ ಮಾರ್ಯಾಮ್ ಮತ್ತು ಅಳಿಯ, ನಿವೃತ್ತ ಸೇನಾಧಿಕಾರಿ ಮಹಮದ್ ಸಫ್ಡರ್ ಅವರಿಗೆ ಅನುಕ್ರಮವಾಗಿ 11, ಎಂಟು ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv