– ಭಾರತ ಪಾಕಿಸ್ತಾನದ ಮೊದಲ ಶತ್ರು ಎಂದಿದ್ದ ಬಾಜ್ವಾ
ಇಸ್ಲಾಮಾಬಾದ್: ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ (Pakistan) ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ(Qamar Javed Bajwa) ನಿಧನರಾಗಿದ್ದಾರೆ.
2026 ರ ಫೆಬ್ರವರಿಯಲ್ಲಿ ಸ್ನಾನಗೃಹದಲ್ಲಿ ಜಾರಿಬಿದ್ದು ಬಜ್ವಾ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅಂದಿನಿಂದ ಅವರು ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಲ್ಲಿ (Rawalpindi Hospital) ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಜನರಲ್‌ಗಳಲ್ಲಿ ಒಬ್ಬರೆಂದು ಹೆಸರು ಪಡೆದಿದ್ದ ಬಜ್ವಾ ಸರ್ಕಾರ ಆಡಳಿತದ ವಿಚಾರದಲ್ಲೂ ಕೈ ಹಾಕುತ್ತಿದ್ದರು. ಇದನ್ನೂ ಓದಿ: Kissing My Ass – ಸೌದಿ ರಾಜ ಎಂಬಿಎಸ್‌ಗೆ ಟ್ರಂಪ್ ವ್ಯಂಗ್ಯ
ನವೆಂಬರ್ 2016 ರಿಂದ ನವೆಂಬರ್ 2022 ರವರೆಗೆ ಅವರು ಸೇನಾ ಮುಖ್ಯಸ್ಥರಾಗಿದ್ದ ಬಜ್ವಾ ಅವಧಿಯಲ್ಲೇ ಭಾರತ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಈ ಏರ್‌ಸ್ಟ್ರೈಕ್ ನಡೆದ ಬಳಿಕ ತಮ್ಮ ಸಾರ್ವಜನಿಕ ಭಾಷಣದಲ್ಲಿ ಭಾರತ ನಮ್ಮ ಮೊದಲ ಶತ್ರು ಎಂದು ಹೇಳಿದ್ದರು. ಇದನ್ನೂ ಓದಿ: ಹಾರ್ಮುಜ್ ದಾಟಲು ಗ್ರೀನ್ ಸಿಗ್ನಲ್ – ಭಾರತಕ್ಕೆ ಬಂತು LPG ಟ್ಯಾಂಕರ್, ಪೈನ್ ಗ್ಯಾಸ್ ಹೊತ್ತ ಮತ್ತೆರಡು ಹಡಗು

