ನವದೆಹಲಿ: ನಾನು ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಹೇಳಿದ್ದಾರೆ.
ಪಾಕ್‍ನ ಸ್ಥಳೀಯ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ ರಜಾಕ್ ತನಗೆ ಐದರಿಂದ ಆರು ವಿವಾಹೇತರ ಸಂಬಂಧಗಳು ಇದ್ದವು ಎಂದು ಹೇಳಿಕೊಂಡಿದ್ದಾರೆ ಮತ್ತು ಅವುಗಳಲ್ಲಿ ಒಂದು ಒಂದೂವರೆ ವರ್ಷಗಳ ಕಾಲ ಇತ್ತು ಎಂದು ಹೇಳಿದ್ದಾರೆ.
Advertisement
Abdul Razzaq openly admitting that he has had 5-6 extramarital affairs till now… Looks proud of it. Now, we know why, and what, he wanted to coach Pandya. #KarkeAaya ???????? pic.twitter.com/tEwHiChQyq
— Navneet Mundhra (@navneet_mundhra) July 17, 2019
Advertisement
ಈ ಸಮಯದಲ್ಲಿ ಈ ಕಾರ್ಯಕ್ರಮದ ನಿರೂಪಕಿ ಈ ಎಲ್ಲಾ ಸಂಬಂಧಗಳು ವಿವಾಹದ ಮುಂಚೆ ಇದ್ದವೋ ಇಲ್ಲ ವಿವಾಹದ ನಂತರ ಇತ್ತೆ ಎಂದು ಕೇಳಿದ್ದಕ್ಕೆ, ವಿವಾಹದ ನಂತರವೂ ನಾನು ಸಂಬಂಧವನ್ನು ಹೊಂದಿದ್ದೆ ಎಂದು ಉತ್ತರಿಸಿದ್ದಾರೆ.
Advertisement
ವಿಶ್ವಕಪ್ ವೇಳೆ ಭಾರತದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಟ್ವೀಟ್ ಮಾಡಿದ್ದ ರಜಾಕ್ ಅವರು, ನಾನು ಹಾರ್ದಿಕ್ ಪಾಂಡ್ಯ ಅವರನ್ನು ವಿಶ್ವದ ಉತ್ತಮ ಆಲ್‍ರೌಂಡರ್ ಆಗಿ ಮಾಡುತ್ತೇನೆ ಎಂದು ಹೇಳಿದ್ದರು.
Advertisement
I can make him one of the best all rounders if not the best and if BCCI wants to make him a better all rounder I will always be available. Thanks
— Abdul Razzaq (@ARazzaqPak) June 27, 2019
ವಿಶ್ವಕಪ್‍ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ನಂತರ ಟ್ವೀಟ್ ಮಾಡಿದ್ದ ರಜಾಕ್ “ನಾನು ಇಂದು ಹಾರ್ದಿಕ್ ಪಾಂಡ್ಯ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ದೊಡ್ಡ ಹೊಡೆತಗಳನ್ನು ಬಾರಿಸುವಾಗ ಅವರ ಬಾಡಿ ಬ್ಯಾಲೆನ್ಸ್ ಆಗುತ್ತಿಲ್ಲ. ನಾನು ಅವರು ಆಡುವಾಗ ಅವರ ಫೂಟ್ ವರ್ಕ್ ಕೂಡ ಗಮನಿಸಿದ್ದೇನೆ. ಅದರಲ್ಲಿ ದೋಷ ಇದೆ ಅದು ಅವರನ್ನು ನಿರಾಸೆಗೊಳಿಸಿದೆ” ಎಂದು ಹೇಳಿದ್ದರು.
ನಾನು ಹಾರ್ದಿಕ್ ಪಾಂಡ್ಯಗೆ ಕೋಚಿಂಗ್ ನೀಡಲು ಸಾಧ್ಯವಾದರೆ, ನಾನು ಅವರನ್ನು ವಿಶ್ವದಲ್ಲಿ ಅತ್ಯುತ್ತಮ ಆಲ್‍ರೌಂಡರ್ ಗಳಲ್ಲಿ ಒಬ್ಬನನ್ನಾಗಿ ಮಾಡುತ್ತೇನೆ. ಬಿಸಿಸಿಐ ಅವರನ್ನು ಉತ್ತಮ ಆಲ್‍ರೌಂಡರ್ ಮಾಡಲು ಬಯಸಿದರೆ ನಾನು ಕೋಚ್ ನೀಡಲು ಯಾವಾಗಲೂ ಲಭ್ಯವಿರುತ್ತೇನೆ ಎಂದು ತಿಳಿಸಿದ್ದರು.
So today I have been closely observing Hardik pandya and I feel like I see a lot of faults in his body’s balance when hitting the bowl hardly and I observed his footwork aswell and I see that also let’s him down sometimes and I feel like if I give him Coaching in for example UAE
— Abdul Razzaq (@ARazzaqPak) June 27, 2019
ಪಾಕಿಸ್ತಾನ ಪರ 265 ಏಕದಿನ ಪಂದ್ಯಗಳನ್ನು ಆಡಿರುವ ರಜಾಕ್, ಮೂರು ಶತಕ ಮತ್ತು 23 ಅರ್ಧಶತಕಗಳೊಂದಿಗೆ 5,080 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 269 ವಿಕೆಟ್‍ಗಳನ್ನು ಕಿತ್ತಿರುವ ಅವರು ಒಂದು ಪಂದ್ಯದಲ್ಲಿ 35 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಆಗಿದೆ.
ಅಬ್ದುಲ್ ರಜಾಕ್ ಅವರು ಪಾಕಿಸ್ತಾನ ಆಯಿಷಾರನ್ನು ಮದುವೆಯಾಗಿದ್ದು ದಂಪತಿಗೆ ಓರ್ವ ಪುತ್ರ, ಪುತ್ರಿ ಇದ್ದಾಳೆ.