– ಬಿಸಿಬಿಯಿಂದ ದಿನಕ್ಕೆ 2.5 ಲಕ್ಷ ರೂ. ವೇತನ
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಕಿವೀಸ್ ಸ್ಪಿನ್ ದಿಗ್ಗಜ ಡೇನಿಯಲ್ ವೆಟ್ಟೋರಿ ಅವರಿಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ಪ್ರತಿದಿನಕ್ಕೆ 2.5 ಲಕ್ಷ ರೂ. ವೇತನ ನೀಡಲಿದೆ. ಈ ಮೂಲಕ ವೆಟ್ಟೋರಿ ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿವರೆಗೆ ಬಾಂಗ್ಲಾದೇಶ ತಂಡವು ಭರ್ಜರಿ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಬಿಸಿಬಿ ತನ್ನ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ 40 ವರ್ಷದ ವೆಟ್ಟೋರಿ ಅವರನ್ನು ಕಳೆದ ತಿಂಗಳು ಆಯ್ಕೆ ಮಾಡಿಕೊಂಡಿತ್ತು. ಮಾತುಕತೆ ಪ್ರಕಾರ ಬಿಸಿಬಿ ವೆಟ್ಟೋರಿ ಅವರಿಗೆ ದಿನದ 3,571 ಅಮೆರಿಕನ್ ಡಾಲರ್ ವೇತನ ನಿಗದಿಪಡಿಸಿದೆ. ಅಂದರೆ ದಿನಕ್ಕೆ ಸುಮಾರು 2.5 ಲಕ್ಷ ರೂಪಾಯಿಯನ್ನು ಡೇನಿಯನ್ ವೆಟ್ಟೋರಿ ವೇತನವಾಗಿ ಪಡೆಯಲಿದ್ದಾರೆ.
Advertisement
Advertisement
ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾದೇಶದ ಕ್ರಿಕೆಟ್ ವೆಬ್‍ಸೈಟ್, ಸ್ಪಿನ್ ಬೌಲಿಂಗ್ ಕೋಚ್ ವೆಟ್ಟೋರಿ ಶೇ. 30ರಷ್ಟು ತೆರಿಗೆ ರೂಪದಲ್ಲಿ ಕಟ್ಟಲಿದ್ದಾರೆ ಎಂದು ತಿಳಿಸಿದೆ. ಈಗಾಗಲೇ ಬಾಂಗ್ಲಾ ತಂಡವನ್ನು ಸೇರಿರುವ ವೆಟ್ಟೋರಿ ತರಬೇತಿ ಆರಂಭಿಸಿದ್ದಾರೆ. ಪ್ರತಿದಿನಕ್ಕೆ 2.5 ಲಕ್ಷ ರೂ. ವೇತನ ಪಡೆಯುತ್ತಿರುವ ವೆಟ್ಟೋರಿ ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಆಗಿದ್ದಾರೆ.
Advertisement
ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಕೋಚಿಂಗ್ ಅವಧಿ ಮುಗಿದ ಮೇಲೆ ಬಿಸಿಬಿ ಡೇನಿಯಲ್ ವೆಟ್ಟೋರಿ ಅವರಿಗೆ ಮಣೆ ಹಾಕಿದೆ. ವೆಟ್ಟೋರಿ ಬಾಂಗ್ಲಾ ತಂಡಕ್ಕೆ ಅರೆಕಾಲಿಕ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
Advertisement
ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ವೇಗಿಗಳದ್ದೇ ದರ್ಬಾರ್ ಆಗಿದ್ದ ಕಾಲದಲ್ಲಿ ಡೇನಿಯನ್ ವೆಟ್ಟೋರಿ ತಮ್ಮದೇ ಆದ ಛಾಪು ಮೂಡಿಸಿದ್ದರು. 18ನೇ ವಯಸ್ಸಿನಲ್ಲಿ ವೆಟ್ಟೋರಿ ಟೆಸ್ಟ್ ಕ್ರಿಕೆಟ್ ಕಣಕ್ಕಿಳಿದಿದ್ದರು. 1996-97ರಲ್ಲಿ ನ್ಯೂಜಿಲೆಂಡ್ ಪರ ಟೆಸ್ಟ್ ಸರಣಿ ಆಡುವ ಮೂಲಕ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು.
ಎಡಗೈ ಸ್ಪಿನ್ನರ್ ವೆಟ್ಟೋರಿ ಟೆಸ್ಟ್ ಕ್ರಿಕೆಟ್‍ನಲ್ಲಿ 113 ಟೆಸ್ಟ್ ಪಂದ್ಯಗಳಿಂದ 362 ವಿಕೆಟ್ ಪಡೆದುಕೊಂಡು ನ್ಯೂಜಿಲೆಂಡ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್ ಪಡೆದು ಭರ್ಜರಿ ಮಿಂಚಿದ್ದರು. ಒಟ್ಟಾರೆ ವಿಶ್ವಕಪ್ ಟೂರ್ನಿಗಳಲ್ಲಿ ವೆಟ್ಟೋರಿ 32 ಪಂದ್ಯಗಳಿಂದ 36 ವಿಕೆಟ್ ಪಡೆದಿದ್ದರು. ಟಿ-20 ಕ್ರಿಕೆಟ್‍ನಲ್ಲಿ 34 ವಿಕೆಟ್ ಪಡೆದು, 205 ರನ್ ಬಾರಿಸಿ ಮಿಂಚಿದ್ದರು.
ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ್ದ ವೆಟ್ಟೋರಿ ಅವರಿಗೆ ಐಪಿಎಲ್‍ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಣೆ ಹಾಕಿತ್ತು. ಆರ್.ಸಿ.ಬಿ ಕೋಚ್ ಆಗಿದ್ದ ವೆಟ್ಟೋರಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ.