ಕಾರವಾರ: ದಾಂಡೇಲಿ ಕಾಂಗ್ರೆಸ್ ವಾಟ್ಸಪ್ ಗ್ರೂಪ್ ನಲ್ಲಿ ಮಾಜಿ ಪುರಸಭೆ ಅಧ್ಯಕ್ಷನೊಬ್ಬ ತನ್ನ ಬೆತ್ತಲೆ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.
Advertisement
ದಾಂಡೇಲಿಯ ಮಾಜಿ ಪುರಸಭಾ ಅಧ್ಯಕ್ಷ ಮತು ಹಾಲಿ ಐಪಿಎಂ ಬಯಲ್‍ಪಾರ ಬಡವಾಣೆಯ ಹಾಲಿ ಸದಸ್ಯನಾಗಿರುವ ರಾಜು ರುದ್ರಪಾಟಿ ತನ್ನ ಬೆತ್ತಲೆ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾನೆ. ದಾಂಡೇಲಿ ಕಾಂಗ್ರೆಸ್ ವಾಟ್ಸಪ್ ಗ್ರೂಪ್ ನಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ, ಸಚಿವ ಆರ್.ವಿ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಇದ್ದಾರೆ.
Advertisement
ಫೋಟೋ ಅಪ್ಲೋಡ್ ಮಾಡಿದ ರಾಜು ರುದ್ರಪಾಟಿಯರ ಮಗ ರಾಜೇಶ್ ವಾಟ್ಸಪ್ ಗ್ರೂಪ್ ಅಡ್ಮಿನ್ ಆಗಿದ್ದಾರೆ. ತಂದೆ ಬೆತ್ತಲೆ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಂತೆ ಮಗ ವಾಟ್ಸಪ್ ಗ್ರೂಪ್ ನ್ನೇ ಡಿಲೀಟ್ ಮಾಡಿದ್ದಾರೆ. ನಡೆದ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದಲ್ಲದೇ, ಗ್ರೂಪ್ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Advertisement