ಸಾಧಕಿ, ಸಮಾಜ ಸುಧಾರಕಿ ಸುಧಾಮೂರ್ತಿಗೆ ಅವಮಾನ

Public TV
0 Min Read
sudhamurthy

ಗದಗ: ಸಾಧಕಿ ಹಾಗೂ ಸಮಾಜ ಸುಧಾರಕಿ ಸುಧಾಮೂರ್ತಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಲಾಗಿದೆ.

ಮಾಜಿ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಹಡಪದ ತನ್ನ ಫೇಸ್‍ಬುಕ್ ಮೂಲಕ ಸುಧಾಮೂರ್ತಿ ಅವರನ್ನು ಅವಮಾನಿಸಿದ್ದಾರೆ. ಮಲ್ಲಿಕಾರ್ಜುನ ಹಡಪದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ `ಸೋಗಲಾಡಿ ಸುಧಾರಕಿ’ ಎಂದು ಸುಧಾಮೂರ್ತಿ ಅವರನ್ನು ಅವಮಾನ ಮಾಡಿದ್ದಾರೆ.

gdg sudhamurthy avamana 2

ಸಮಾಜ ಸೇವಕಿ ಸುಧಾಮೂರ್ತಿ ಬಗ್ಗೆ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಫೇಸ್‍ಬುಕ್‍ನಲ್ಲಿ ಮಲ್ಲಿಕಾರ್ಜುನ ಹಡಪದಗೆ ಜನರು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.

ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Share This Article
Leave a Comment

Leave a Reply

Your email address will not be published. Required fields are marked *