ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಬಂದಿರುವುದಾಗಿ ಆರೋಪಿಸಲಾಗಿದೆ. ಆಗಸ್ಟ್ 14 ರಂದು ‘ಅಮನ್’ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಸಂದೇಶ ಬಂದಿದೆ.
ಸಂದೇಶದಲ್ಲಿ “ತುಮ್ಕೋ ಪತಾ ಹೈ ತುಮ್ನೆ ಕ್ಯಾ ಕಿಯಾ ಹೈ, ಇಸ್ಕಾ ಹಿಸಾಬ್ ತುಮ್ಕೋ ದೇನಾ ಪಡೆಗಾ” (ನೀವು ಏನು ಮಾಡಿದ್ದೀರಿ ಎಂದು ನಿಮಗೆ ತಿಳಿದಿದೆ ಮತ್ತು ನೀವು ಅದಕ್ಕೆ ಲೆಕ್ಕ ಕೊಡಬೇಕಾಗುತ್ತದೆ) ಎಂದು ಬರೆಯಲಾಗಿದೆ. ಮತ್ತೊಂದು ಸಂದೇಶದಲ್ಲಿ, “ತುಮ್ಕೋ ಖತಮ್ ಕರ್ ದೇಂಗೆ (ನಿಮ್ಮನ್ನು ಮುಗಿಸಲಾಗುವುದು) ಎಂದು ಹೇಳಲಾಗಿದೆ.
Advertisement
Former Mumbai NCB zonal director Sameer Wankhede received death threats on social media. He gave this information to Goregaon Police Station.
(File Pic) pic.twitter.com/iIm8XRJirK
— ANI (@ANI) August 19, 2022
Advertisement
ಇದರ ಬೆನ್ನಲ್ಲೇ ಸಮೀರ್ ವಾಂಖೆಡೆ ಗೋರೆಗಾಂವ್ ಪೊಲೀಸರನ್ನು ಸಂಪರ್ಕಿಸಿದ್ದು, ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ನಿನ್ನೆ ವಾಂಖೆಡೆ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಖಾತೆಯು ಶೂನ್ಯ ಅನುಯಾಯಿಗಳನ್ನು ಹೊಂದಿದ್ದು, ವಾಂಖೆಡೆಗೆ ಬೆದರಿಕೆ ಹಾಕುವ ಉದ್ದೇಶದಿಂದ ರಚಿಸಲಾಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟ್ವೀಟ್ ಮಾಡಿದ್ದಕ್ಕೆ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ
Advertisement
Advertisement
2021 ರ ಅಕ್ಟೋಬರ್‍ನಲ್ಲಿ ಮುಂಬೈ ಕ್ರೂಸ್‍ನಲ್ಲಿ ಡ್ರಗ್ಸ್ ದಾಳಿ ನಡೆಸಿದ ಮೇಲೆ ಎನ್‍ಸಿಬಿಯ ಮುಂಬೈ ಕಚೇರಿಯ ಮಾಜಿ ವಲಯ ನಿರ್ದೇಶಕ ವಾಂಖೆಡೆ ಮುನ್ನಲೆಗೆ ಬಂದಿದ್ದರು. ಪ್ರಕರಣ ಹಿನ್ನೆಲೆಯಲ್ಲಿ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಮತ್ತು 19 ಇತರರನ್ನು ಬಂಧಿಸಿದ್ದರು. ಮತ್ತು ಕೆಲವು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರು.
ಈ ನಡುವೆ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನಲೆ ಪ್ರಕರಣವನ್ನು ಮುಂಬೈ ವಲಯದಿಂದ ಎನ್‍ಸಿಬಿಯ ಕೇಂದ್ರ ತಂಡಕ್ಕೆ ವರ್ಗಾಯಿಸಲಾಯಿತು. ವಾಂಖೆಡೆ ಅವರನ್ನು ಪ್ರಕರಣದಿಂದ ತೆಗೆದುಹಾಕಲಾಯಿತು ಮತ್ತು ಅವರ ವಿರುದ್ಧ ವಿಜಿಲೆನ್ಸ್ ತನಿಖೆಯನ್ನು ಪ್ರಾರಂಭಿಸಲಾಯಿತು.