ನವದೆಹಲಿ: ಮಾಜಿ ಸಂಸದ ವಿಜಯ್ ಗೋಯೆಲ್ ಅವರ ಮೊಬೈಲ್ ಫೋನ್‍ನನ್ನು ದುಷ್ಕರ್ಮಿಯೋರ್ವ ಉತ್ತರ ದೆಹಲಿಯ ಕೆಂಪು ಕೋಟೆ ಬಳಿ ಕಿತ್ತುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸದ ವಿಜಯ್ ಗೋಯೆಲ್ ಅವರು ದರಿಯಾಗಂಜ್‍ನಿಂದ ಸುಭಾಷ್ ಮಾರ್ಗದ ಮೂಲಕ ಕೆಂಪು ಕೋಟೆಯ ಕಡೆಗೆ ಸೋಮವಾರ ಬರುತ್ತಿದ್ದಾಗ ಈ ಘಟನೆ ನಡೆದಿದೆ. ರಾತ್ರಿ 7.45 ರ ಸುಮಾರಿಗೆ ವಿಜಯ್ ಗೋಯೆಲ್ ಅವರ ಕಾರು ಜಾಮಾ ಮಸೀದಿ ಮೆಟ್ರೋ ನಿಲ್ದಾಣದ ಬಳಿ ತಲುಪಿದಾಗ ವ್ಯಕ್ತಿಯೋರ್ವ ಬಂದು ಅವರ ಕೈಯಲ್ಲಿದ್ದ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನದ ನಾಡಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರಾ ಸಿದ್ದರಾಮಯ್ಯ..?
Advertisement
Advertisement
ಸದ್ಯ ಈ ಘಟನೆಯ ಸಂಬಂಧ ಪಿಎಸ್‍ಒ ಎಎಸ್‍ಐ ಸತ್ಯವೀರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮತ್ತು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗ್ತಿರಲಿಲ್ಲ: ಹೆಚ್‍ಡಿಕೆ ಕಿಡಿ