Monday, 19th November 2018

Recent News

ಕಾಣೆಯಾಗಿದ್ದ ಮೋದಿ ಮಾರ್ಕ್ಸ್ ಕಾರ್ಡ್ ರಮ್ಯಾಗೆ ಸಿಕ್ತಂತೆ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಒಂದು ರಿಪೋರ್ಟ್ ಕಾರ್ಡ್ ಕೊಟ್ಟಿದೆ. ಈ ರಿಪೋರ್ಟ್ ಕಾರ್ಡ್ ಇದೀಗ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ.

ಶಾಲೆಯಲ್ಲಿ ಸಿಗೋ ಮಾರ್ಕ್ಸ್  ಕಾರ್ಡ್ ನಂತೆ ಮಾಡಿ ಅದರಲ್ಲಿ ವಿಷಯ, ರಿಮಾರ್ಕ್ ಮತ್ತು ದರ್ಜೆ ಅಂತ ರಿಪೋರ್ಟ್ ಕಾರ್ಡ್ ನಲ್ಲಿ ನಮೂದಿಸಿದ್ದಾರೆ.

ಹೆಸರು – ಪ್ರಧಾನಿ ನರೇಂದ್ರ ಮೋದಿ
ಅವಧಿ – 2014ರಿಂದ ಇಲ್ಲಿಯವರೆಗೂ
ರೋಲ್ ನಂಬರ್ – 282 (ಲೋಕಸಭಾ ಸದಸ್ಯರ ಸಂಖ್ಯೆ)
ಬ್ಲಡ್ ಗ್ರೂಪ್ – ಬಿಜೆಪಿ
ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ – ಡಿ ಗ್ರೇಡ್

ರಕ್ಷಣಾ ಪರೀಕ್ಷೆಯಲ್ಲಿ – ಸಿ ಗ್ರೇಡ್
ಆರೋಗ್ಯ ಪರೀಕ್ಷೆಯಲ್ಲಿ – ಎಫ್ ಗ್ರೇಡ್
ಆರ್ಥಿಕ ಪರೀಕ್ಷೆಯಲ್ಲಿ – ಎಫ್ ಗ್ರೇಡ್
ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ – ಸಿ ಗ್ರೇಡ್

ಸ್ಟೋರಿ ಟೆಲ್ಲಿಂಗ್‍ನಲ್ಲಿ – ಎ + +
ಇತರೆ ವಿಭಾಗಗಳು – ಹಿಂಸೆ – ಯೆಸ್, ಕೋಮುವಾದ – ಯೆಸ್
ಫೈನಲ್ ಗ್ರೇಡ್ – ಡಿ ಗ್ರೇಡ್

ಕೊನೆಯದಾಗಿ ಈ ಹುಡುಗ ಹಿಂಸಾತ್ಮಕವಾಗಿ ವರ್ತಿಸುತ್ತಾನೆ.. ಅಸಮರ್ಥ.. ಆದರೆ ಸುಳ್ಳು ಹೇಳುವುದರಲ್ಲಿ, ದ್ವೇಷ ಹರಡುವುದರಲ್ಲಿ ಪರಿಣಿತ ಅಂತ ಹೇಳಲಾಗಿದೆ. ಇದೀಗ ಈ ರಿಪೋರ್ಟ್ ಕಾರ್ಡನ್ನು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಮೋದಿಯನ್ನು ಹೀಗಳೆದಿದ್ದಾರೆ.

Leave a Reply

Your email address will not be published. Required fields are marked *