ಬೆಂಗಳೂರು: ಸದ್ಯಕ್ಕೆ ನಾನು ರಾಜಕೀಯಕ್ಕೆ ಬರುವ ಉದ್ದೇಶವನ್ನು ಹೊಂದಿಲ್ಲ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ? ರಾಜ್ಯ ರಾಜಕಾರಣಕ್ಕೆ ಬರೋ ಆಸೆ ಇಟ್ಟುಕೊಂಡಿದ್ದೀರಾ? ಮಂಡ್ಯದಿಂದ ಏನಾದರೂ ಕಣಕ್ಕಿಳಿಯುವ ಆಸೆ ಇಟ್ಟುಕೊಂಡಿದ್ದೀರಾ? ಎಂದು ಆಂಗ್ಲ ಪತ್ರಿಕೆಯೊಂದು ರಮ್ಯಾ ಅವರನ್ನು ಪ್ರಶ್ನಿಸಿತ್ತು.
Advertisement
ಸಂದರ್ಶನದಲ್ಲಿ ರಮ್ಯಾ, ಸದ್ಯಕ್ಕೆ ನಾನು ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಸಕ್ರಿಯ ರಾಜಕಾರಣವೇ ನನಗೆ ಮುಖ್ಯವಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾ ಕೆಲಸ ನನಗೆ ಖುಷಿ ತಂದಿದೆ. ಪಕ್ಷದ ತತ್ವ-ಸಿದ್ಧಾಂತದ ಪ್ರಚಾರದಲ್ಲಿ ತೊಡಗಿದ್ದೇನೆ. ಕರ್ನಾಟಕ ಚುನಾವಣೆಯಲ್ಲೂ ಪಕ್ಷದ ತತ್ವ-ಸಿದ್ಧಾಂತದಲ್ಲಿ ತೊಡಗಿದ್ದೇನೆ ಎಂದು ಉತ್ತರಿಸಿದರು.