ಮಂಡ್ಯ: ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ತಯಾರಿ ನಡೆಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ರಂಜಿತಾ ಅವರು ಈಗಾಗಲೇ ಅಫಿಡವಿಡ್ ರೆಡಿ ಮಾಡುತ್ತಿದ್ದಾರೆ.
ದಾಖಲೆಯಲ್ಲಿ ಯಾವುದೇ ರೀತಿ ತಪ್ಪಾಗದಂತೆ ತಮ್ಮ ಆಪ್ತ ವಕೀಲರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಸಡನ್ ಆಗಿ ಹೆಸರು ಅನೌನ್ಸ್ ಮಾಡಿದ್ರೆ ಸಿದ್ಧವಿರೋಣ ಅಂತಾ ಅಫಿಡವಿಡ್ ರೆಡಿ ಮಾಡ್ತಿದ್ದೇವೆ ಅಂತ ಸುದ್ದಿಗಾರರಿಗೆ ಹೇಳಿದ್ದಾರೆ.
ಜೆಡಿಎಸ್‍ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವುದು ಸಮಂಜಸವಲ್ಲ. ಈಗಲೂ ಅಭ್ಯರ್ಥಿ ಹಾಕದಿದ್ರೆ 2019ರ ಚುನಾವಣೆಯಲ್ಲಿ ಕಷ್ಟ ಆಗುತ್ತೆ. ಮಂಡ್ಯದಲ್ಲಿ ರಮ್ಯಾಗೆ ಮತ್ತೆ ಅವಕಾಶ ಕೊಡಿ. ಅವರು ವಾಪಸ್ ಬರ್ತಾರೆ. ಇಲ್ಲ ನನಗೆ ಅವಕಾಶ ಕೊಡಿ. ನಾನು ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇವೆ ಅಂತ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv